ಹುಬ್ಬಳ್ಳಿ: ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಟಿವಿ9 ವರದಿಗಾರರ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭವನ್ನು ನೆರವೇರಿಸಲಾಯಿತು.
ಟಿವಿ 9 ವರದಿಗಾರರಾಗಿ ಕಳೆದ ಎರೆಡುವರೆ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿ, ಕೊಪ್ಪಳ ಜಿಲ್ಲೆಗೆ ವರ್ಗಾವಣೆಯಾಗಿರುವ ಶಿವಕುಮಾರ ಪತ್ತಾರ್ ಅವರಿಗೆ ಇಂದು ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಬೀಳ್ಕೊಡಲಾಯಿತು. ಅದೇ ರೀತಿ ಕೊಪ್ಪಳ ಜಿಲ್ಲೆಯಿಂದ ಹುಬ್ಬಳ್ಳಿಗೆ ವರ್ಗಾವಣೆಗೊಂಡ ಸಂಜಯ್ ಚಿಕ್ಕಮಠ ಅವರನ್ನು ಅಸೋಸಿಯೇಶನ್ ವತಿಯಿಂದ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷರು ಪ್ರಕಾಶ್ ನೂಲ್ವಿ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಮ್ ಅಸುಂಡಿ, ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಕಲ್ಮೇಶ್ ಮಂಡ್ಯಾಲ್, ಕಾರ್ಯದರ್ಶಿಗಳಾದ ಯಲ್ಲಪ್ಪ ಸೋಲಾರಗೊಪ್ಪ, ಸಂತೋಷ್ ಅರಳಿ, ಕಾರ್ಯಕಾರಣಿ ಸದಸ್ಯರಾದ ಸುನಿಲ್ ಪಾಟೀಲ್, ಪಾಂಡು ಉಪ್ಪಾರ, ವಿನಾಯಕ್ ಪೂಜಾರಿ, ಮಹೇಶ್ ಬೊಜಗಾರ್ ಹಾಗೂ ಅಸೋಸಿಯೇಶನ್ ಸದಸ್ಯರಾದ ಮಹೇಂದ್ರ ಚೌಹಾಣ್, ಮಲ್ಲಿಕಾರ್ಜುನ್ ಪಟ್ಟೆದ್, ಪ್ರಕಾಶ್ ಹಿರೇಮಠ್, ಶೇಖರ್ ಪಿ, ವಿನೋದ್ ಇಚ್ಛಂಗಿ, ಮಲ್ಲಿಕ್ ಬೆಳಗಲಿ, ಆನಂದ್ ಪತ್ತಾರ್, ನಾರಾಯಣಗೌಡ ಪಾಟೀಲ್, ಶಿವಾಜಿ ಲಾತುರ್ಕರ್, ಭರತ್ ಮಂಗಳಗಟ್ಟಿ ಉಪಸ್ಥಿತರಿದ್ದರು.