ಹುಬ್ಬಳ್ಳಿ: ನಗರದಲ್ಲಿ ಯುವಕನ ಮೇಲೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧನ ಮಾಡುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಗಣೇಶ ಪೇಟ್ ತ್ರಿವೇಣಿ ಬೇಕರಿ ಹತ್ತಿರ ಇಬ್ರಾಹಿಂ ಸಿತಾರವಾಲೆ ಅನ್ನೋ ಯುವಕನ ಮೇಲೆ ಏಳೆಂಟು ಜನರ ಗುಂಪು ಚಾಕು ಹಾಗೂ ಇತರೆ ಆಯುಧಗಳಿಂದ ಹಲ್ಲೆ ಮಾಡಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲರಾಜ್ ಬಳ್ಳಾರಿ ಅಲಿಯಾಸ್ ಬಂಗಾರ ಬಾಲ್ಯಾ, ಪ್ರಜ್ವಲ್, ಮೊಹಮದ್ ಹಫೀಜ್, ಆಕೀಬ್, ದತ್ತಾತ್ರಯ ಹಾಗೂ ಚರಣ್ ಪ್ರಸಾದ್ ಇವರುಗಳನ್ನು ಬಂಧನ ಮಾಡಲಾಗಿದೆ.

ಇನ್ನು ಈ ಹಿಂದೆ ಇದೇ ಆರೋಪಿಗಳು ದಾವೂದ್ ನದಾಫ್ ಅನ್ನೋ ವ್ಯಕ್ತಿಯ ಮೇಲೆ ಕೊಲೆಗೆ ಸಂಚು ರೂಪಿಸಿ, ಕೊಲೆ ಯತ್ನದ ಪ್ರಕರಣದಲ್ಲಿ ಜೈಲು ಪಾಲಾಗಿ ಹೊರಗಡೆ ಬಂದಿದ್ದರು. ಇವರ ಮೇಲೆ ಇನ್ನು ಬೇರೆ ಬೇರೆ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿವೆ.
ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೋಲಿಸ್ ಅಯ್ಯುಕ್ತ ಎನ್ ಶಶಿಕುಮಾರ ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ತಲೆ ಮರಿಸಿಕೊಂಡ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.