ಹುಬ್ಬಳ್ಳಿ: ನಗರದಲ್ಲಿ ಮೃತ ಬಾಲಕಿಯ ಸಹೋದರಿಯ ವಿದ್ಯಾಭ್ಯಾಸ ಸೇರಿ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಕೆಜಿಪಿ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ತಿಳಿಸಿದರು.
ನಗರದಲ್ಲಿ ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹತ್ಯೆಯಾಗಿದ್ದ ಬಾಲಕಿಯ ತಂದೆ-ತಾಯಿಯನ್ನು ಮಾತನಾಡಿಸಲು ಬಂದಿದೆ, ಅವರ ಕಣ್ಣೀರು ನೋಡಿ ಬಹಳ ಸಂಕಟ ಆಗುತ್ತಿದೆ. ಬಾಲಕಿಯ ಕೊಲೆ ಮಾಡಿದ ಆರೋಪಿಯ ಮನಸ್ಥಿತಿ ಹೇಗಿತ್ತು ಇಂತಹ ಕೆಲಸ ಮಾಡೋಕೆ ಹೇಗಾದ್ರೂ ಮನಸ್ಸು ಬಂತು, ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಕೆಜಿಪಿ ಫೌಂಡೇಶನ್ ನಿಂದ ಬಾಲಕಿಯ ಹಿರಿಯ ಸಹೋದರಿಯ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡಿದ್ದು, ಅವರು ಯಾವುದೇ ಶಾಲೆಯಾಗಲಿ, ಯಾವುದೇ ವ್ಯಾಸಂಗಕ್ಕೂ ನಾವು ಅದರ ಖರ್ಚು ನೋಡಿಕೊಳ್ಳುತ್ತೇವೆ. ಕುಟುಂಬಸ್ಥರು ಈ ನೋವಿನಿಂದ ಹೊರ ಬಂದ ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳುತ್ತೇವೆ ಆ ಕುಟುಂಬದಲ್ಲಿ ನಾನೂ ಒಬ್ಬನಾಗಿ ನಿಂತಿದ್ದೇನೆ. ಆದರೂ ಆ ತಂದೆ-ತಾಯಿ ದುಃಖ ನಾವು ತಗೋಳೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.