ಹುಬ್ಬಳ್ಳಿ: ಕ್ರಿಕೆಟ್ ಆಟವಾಡುವ ಸಮಯದಲ್ಲಿ ಬಾಲ್ ಹುಡುಕಲು ಹೋಗಿ ಬಾಲಕನೊಬ್ಬ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಶ್ರೀನಗರದಲ್ಲಿ ನಡೆದಿದೆ.
ಗೆಳೆಯರೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ ಬಾಲ್ ಬಾವಿಯತ್ತ ಹೋಗಿದೆ. ಬಾಲ್ ತರಲು ಹೋಗಿರುವ ದೀಪಕ ವಿನೋದ ಮೆಣಸಿನಕಾಯಿ (16) ಎಂಬ ಬಾಲಕ ಬಾವಿಗೆ ಬಿದ್ದಿದ್ದು, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರಕ್ಕೆ ತಗೆದಿದ್ದಾರೆ, ಆದರೆ ಬಾಲಕ ಸಾವಿಗೀಡಾಗಿದ್ದಾನೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಾಲ್ಕು ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ, ಸದ್ಯ ಸಾವಿಗೀಡಾದ ಬಾಲಕನ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.