ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆಯಲ್ಲಿ ವ್ಯಕ್ತಿ ಓರ್ವನಿಗೆ ಚಾಕು ಹಾಕಿದ ಘಟನೆ ನಗರದ ವೀರಾಪುರ ಓಣಿ ಕರಿಯಮ್ಮ ದೇವಸ್ಥಾನದ ಹತ್ತಿರ ನಡೆದಿದೆ.

ಜಿದ್ದಿ ಮಲ್ಲಿಕ್ ಅನ್ನೋ ವ್ಯಕ್ತಿಗೆ ಜಮೀರ್ ಅಲಿಯಾಸ್ ಜಮ್ಮು ಅನ್ನೋ ವ್ಯಕ್ತಿ ಚಾಕು ಹಾಕಿರುವುದಾಗಿ ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯೂ ಕ್ಷುಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಕಸಬಾಪೇಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇವತ್ತು ಅದೇ ವಿಚಾರಕ್ಕೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಚಾಕು ಹಾಕಿದ ವ್ಯಕ್ತಿ ಜೊತೆ ಇನ್ನೂ ಹಲವರು ಬಾಗಿ ಆಗಿದ್ದಾರೆ ಎನ್ನಲಾಗಿದೆ.

ಸದ್ಯ ಗಾಯಗೊಂಡ ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹಾನಿಂಗಪ್ಪ ನಂದಗಾವಿ ಬೇಟಿ ನೀಡಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಿಂದ ಮಾಹಿತಿ ಪಡೆದರು.
ಇತ್ತ ಘಟನಾ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಹಾಗೂ ಘಂಟಿಕೇರಿ ಠಾಣೆಯ ಇನ್ಸ್ಪೆಕ್ಟರ್ ಬಿ ಎ ಜಾಧವ್ ಅವರು ಬೇಟಿ ನೀಡಿ ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.