ಹುಬ್ಬಳ್ಳಿ: ವಾಣಿಜ್ಯ ನಗರಿ , ಛೋಟಾ ಮುಂಬೈ ಹುಬ್ಬಳ್ಳಿ ಅಂದ್ರೆ ಅದೆಷ್ಟೋ ಜನರಿಗೆ ಇದು ಕೇವಲ ಬ್ಯೂಸಿನೆಸ್ ಗೆ ಮಾತ್ರ ಸೀಮಿತ ನಗರ ಅನ್ನೋಭಾವನೆ ಇದೆ. ಅಷ್ಟೇ ಅಲ್ದೇ ದಿನ ಕಳೆದಂತೆ ಈ ಅವಳಿನಗರದ ಅಭಿವೃದ್ಧಿ ಬಗ್ಗೆ ಜನಸಾಮಾನ್ಯರು ಅದೆಷ್ಟೋ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದಾರೆ. ಆದ್ರೆ ಈ ಅಭಿವೃದ್ಧಿಯ ಕನಸಿನ ಬದಲಾಗಿ ಈ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಅದೆಷ್ಟೋ ಹೈಟೆಕ್ ಧಂಧೆಗಳು ಈ ವಾಣಿಜ್ಯ ನಗರಿಗೆ ಸಾಕಷ್ಟು ಅಪಕೀರ್ತಿ ತರುತ್ತಿರುವುದರಲ್ಲಿ ಸಂಶಯವೇ ಇಲ್ಲ. ಇಂತಹ ಹೈಟೆಕ್ , ಕಾನೂನುಬಾಹಿರ ಚಟುವಟಿಗಳಿಗೇ ಸೆಡ್ಡು ಹೊಡೆಯುವಂತಹ *ಹೈ..ಟ್ (ಟೆಕ್) ಚೆಕ್* ಧಂಧೆಯೊಂದರ ಜಾಲ ಇದೇ ಎರಡನೇ ಅತೀ ದೊಡ್ಡ ನಗರ ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದೆ.

ಸಾಮಾನ್ಯವಾಗಿ ಈ ಹಿಂದೆ ಗ್ರಾಮೀಣ ಭಾಗದಲ್ಲಿ ಯತೇಚ್ಛವಾಗಿ ಮೂಢನಂಬಿಕೆಯಂತಹ ಪ್ರಸಂಗಗಳು, ಪ್ರಯೋಗಗಳು ನಡೆಯುತ್ತಿದ್ದವು.ಆದ್ರೆ ಇದೀಗ ಗ್ರಾಮೀಣ ಭಾಗದ ನಾಗರೀಕರು ಪ್ರಭುದ್ಧರಾಗಿದ್ದು, ಈ ಮೂಢನಂಬಿಕೆಯ ಭೂತ ಇದೀಗ ಈ ಹೈಟೆಕ್ ಸಿಟಿಗೆ ಅಂಟಿಕೊಂಡಿದೆ.ಈ ತಾಂತ್ರಿಕ ಯುಗದಲ್ಲೂ ಮೂಢ ನಂಬಿಕೆ ಎಂಬ ನಶೆಯ ಮಧ ಏರಿಸಿಕೊಂಡ ಕಿರಾತಕರು ಕೆಲ ಅಸಹಾಯಕ ಬಡ ಕುಟುಂಬದ ಮಹಿಳೆಯರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಅಮಾಯಕ ಮಹಿಳೆಯರನ್ನೇ ಟಾರ್ಗೇಟ್ ಮಾಡಿಕೊಂಡು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಹ್ಯೇಯ ಧಂಧೆಯೊಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅಂದ್ರೆ ನೀವು ನಂಬಲೇಬೇಕು.

ಎಸ್…….ಇಂತಹ ಹ್ಯೇಯ ಧಂಧೆಯ ಕರಾಳ ಮುಖವನ್ನ, ಆ ಕಿರಾತಕರ ಅಸಲೀ ಬಂಡವಾಳದ ಟ್ರೇಲರ್ ನ್ನ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಅನಾವರಣ ಮಾಡುತ್ತಿದೆ. ಇನ್ನೂ ಈ ಕರಾಳಧಂಧೆಯ ಫುಲ್ ಪಿಚ್ಛರ್ ಶೀಘ್ರವೇ ಅನಾವರಣಗೊಳ್ಳಲಿದೆ. ವೇಟ್ ಆ್ಯಂಡ್ ಸೀ……