ಹುಬ್ಬಳ್ಳಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಸಹೋದರ ನಡುವೆ ಜಗಳ ನಡೆಡಿದ್ದು, ಅದನ್ನು ಬಿಡಿಸಲು ಹೋದ ತಾಯಿಗೆ ಏಟು ಬಿದ್ದು ಸಾವನ್ನಪ್ಪಿದ ಘಟನೆ ನಗರದ ತೊರವಿಹಕ್ಕಲ್ ನಲ್ಲಿ ನಡೆದಿದೆ.
ಪದ್ಮಾ ಚಲೂರಿ (45) ಕೊಲೆಯಾದ ದುರ್ದೈವಿ, ಅಣ್ಣ ಮಂಜು ಹಾಗೂ ತಮ್ಮ ಅರುಣ್ ಕಟಿಂಗ್ ಶಾಪ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಅಣ್ಣ ಮಂಜು ಆಕ್ರಮ ಸಂಬಂಧ ಮಾಡಿಕೊಂಡಿದ್ದ. ಇದನ್ನು ಪ್ರಶ್ನಿಸಿದ ತಮ್ಮನ ಜೊತೆ ಜಗಳ ಶುರುವಾಗಿದೆ. ಅದು ಪೋಲಿಸ್ ಮೆಟ್ಟಿಲು ಕೂಡ ಏರಿದೆ. ಪೊಲೀಸರು ಇಬ್ಬರಿಗೆ ಬುದ್ಧಿ ಮಾತು ಹೇಳಿ ಅಲ್ಲಿಂದ ಕಳಿಸಿದ್ದಾರೆ.

ಮನೆಗೆ ಬಂದು ಮತ್ತೆ ತಡ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ನಡೆಡಿದೆಯಂತೆ, ಅಣ್ಣನಾದ ಮಂಜು, ತಮ್ಮನಿಗೆ ವಿಂಡೋ ಗ್ಲಾಸ್ ನಿಂದ್ ಹಲ್ಲೆ ಮಾಡಲು ಮುಂದಾಗಿದ್ದಾನೆ, ಅದನ್ನು ಬಿಡಿಸಲು ಬಂದ ತಾಯಿಗೆ ಅದು ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಆಕೆಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ವಶಕ್ಕೆ ಪಡೆಡಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಬೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಈ ಕುರಿತು ಕಮರಿಪೇಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.