ಹುಬ್ಬಳ್ಳಿ: ಗೋವಾ ಊರಿಗೆ ಕರೆದುಕೊಂಡು ಹೋಗೋ ವಿಚಾರಕ್ಕೆ ವ್ಯಕ್ತಿ ಓರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಬಾರ್ ಒಂದರಲ್ಲಿ ನಡೆದಿದೆ.
ಸಿದ್ದಾರೂಢ ನಗರದ ನಿವಾಸಿ ಪವನ್ ಹೊಸೂರ್ ಹಲ್ಲೆಗೆ ಒಳಗಾದ ವ್ಯಕ್ತಿ. ಬಾರ್ ಒಂದರಲ್ಲಿ ಗೋವಾ ಪ್ರವಾಸಕ್ಕೆ ಹೋಗುವ ವಿಚಾರಕ್ಕೆ ಚರ್ಚೆ ನಡೆದ ಸಂದರ್ಭದಲ್ಲಿ, ಗೋವಾ ಹೋಗುವ ಖರ್ಚು ನೀನೇ ಬರಿಸಬೇಕು ಅಂತ ಶಂಕರ್ ದೊಡ್ಡಮನಿ ಅಲಿಯಾಸ್ ಕೋಳಿ ಶಂಕರ್ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಪವನ್ ಹೊಸೂರ್ ಅವನಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಸೋಡಾ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ಮಾಡಿದ ಆರೋಪಿ ಮೇಲೆ ಬೇರೆ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಕೇಳಿ ಬಂದಿದೆ, ಸದ್ಯ ಈ ಕುರಿತು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶಂಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.