ಹುಬ್ಬಳ್ಳಿ : ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಓರ್ವ ಓಸಿ ಮಟ್ಕಾ ತೆಗೆದುಕೊಳ್ಳುತ್ತಿರುವ ವೇಳೆ ದಾಳಿ ನಡೆಸಿದ ಪೊಲೀಸರು ಓಸಿ ಮಟ್ಕಾ ತೆಗೆದುಕೊಳ್ಳುತ್ತಿದ್ದವನ್ನ ವಶಕ್ಕೆ ಪಡೆದು 2000 ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಹಳೇ ಹುಬ್ಬಳ್ಳಿಯ ಬಾಣತಿಕಟ್ಟಿ ನಿವಾಸಿ ಖಾಜಾಮೈನುದ್ದೀನ್ ಬಂಧಿತ ಆರೋಪಿ. ಪೊಲೀಸರು ಬೈಕ್ ಪೆಟ್ರೋಲಿಂಗ್ ಮಾಡುವ ವೇಳೆ ನಗರದ ಯಲ್ಲಾಪುರ ಓಣಿಯ ಕಚ್ಚಿ ಹಾಲ್ ಬಳಿ ಆರೋಪಿಯು ಸಾರ್ವಜನಿಕರ ಸ್ಥಳದಲ್ಲಿ ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನ ತನ್ನ ಬಳಿ ಕರೆದುಕೊಂಡು ಒಂದು ರೂಪಾಯಿಗೆ 90 ರೂಪಾಯಿ ಕೊಡುವುದಾಗಿ ಹೇಳಿ ಓಸಿ ಮಟ್ಕಾ ತೆಗೆದುಕೊಳ್ಳುತ್ತಿದ್ದ.

ಈ ವೇಳೆ ಸಿಸಿಬಿ ವಿಭಾಗದ ಪಿಎಸ್ಐ ರೂಪಕ್ ಡಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂತೋಷ್ ಇಚ್ಛಂಗಿ ಹಾಗೂ ಎಸ್ ಐ ಕಡೆಮನಿ ಅವರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಡ ಬೆಂಡಿಗೇರಿ ಪೋಲಿಸ್ ಠಾಣೆಗೆ ಒಪ್ಪಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಜೂಜಿನ ಗೀಳು ಗೋಳನ್ನು ವಿವರಿಸುವ ಎರಡು ಗಾದೆ ಓದಿ, “ಓಪನ್ ಕೊ ಖಾನಾ ನಹೀ, ಕ್ಲೋಸ್ ಕೊ ನೀಂದ್ ನಹೀ”; “ಮಡಕಿ ತರಾಕ ರೊಕ್ಕ ಇಲ್ಲದಿದ್ದರೂ ಮಟ್ಕ ಆಡ್ತಾಳ”.