ವಿಜಯಪುರದ ಮನಗೂಳಿ ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶೇಖರ್ ನನ್ನು ಪೊಲೀಸರು ಹುಬ್ಬಳ್ಳಿಗೆ ಕರೆತಂದಿದ್ದಾರೆ. ತನಿಖೆಯ ಭಾಗವಾಗಿ ಹುಬ್ಬಳ್ಳಿಯ ಹಲವು ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಪೊಲೀಸರು ಶೇಖರ್ನ ಕೇಶ್ವಾಪುರದ ನಿವಾಸ, ಹಾಗೂ ಗದಗ ರಸ್ತೆಯಲ್ಲಿರುವ ಸೆಂಟ್ ಆಂಡ್ರ್ಯೂಸ್ ಶಾಲೆಯಲ್ಲಿ ಮಹಜರು ನಡೆಸಿದ್ದು, ಈ ಸ್ಥಳಗಳಲ್ಲಿ ಚಿನ್ನ ಕರಗಿಸಲು ಬಳಸಲಾಗಿದ್ದ ಕೆಲವು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತದನಂತರದ ತನಿಖೆಯಲ್ಲಿ ಶೇಖರ್ ಮತ್ತು ಇತರ ಆರೋಪಿಗಳು ಬ್ಯಾಂಕ್ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಹುಬ್ಬಳ್ಳಿಗೆ ತಂದು, ಅದನ್ನು ಸೆಂಟ್ ಆಂಡ್ರ್ಯೂಸ್ ಶಾಲೆಯಲ್ಲಿ ಬಚ್ಚಿಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಗಮನಿಸಬಹುದಾದ ವಿಷಯವೆಂದರೆ, ಶೇಖರ್ ಈ ಶಾಲೆಯ ಚೇರಮನ್ ಆಗಿದ್ದಾನೆ.
ಪೊಲೀಸ್ ಕಾರ್ಯಾಚರಣೆ ಪ್ರಮುಖ ಮುನ್ನಡೆ ಸಾಧಿಸಿದ್ದು, ಪ್ರಕರಣ ಸಂಬಂಧ ಇನ್ನು ಹಲವು ಅಂಶಗಳು ಬಯಲಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಇನ್ನೂಳಿದ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.