ಹುಬ್ಬಳ್ಳಿ : ಹೈಡ್ರೋಜಿನ್ ಹೊತ್ತು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಹುಬ್ಬಳ್ಳಿ ಹೊರ ವಲಯದ ರಾಯನಾಳ ಸೇತುವೆ ಬಳಿ ನಡೆದಿದೆ.
ಲಾರಿಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದೊಂದಿಗೆ ಟ್ಯಾಂಕರ್ ತೆರವು ಕಾರ್ಯಾಚರಣೆ ನಡೆಸಿದರು.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದರು. ಟ್ಯಾಂಕರ್ ಸ್ಥಳಾಂತರದ ನಂತರ ಸಂಚಾರ ಯಥಾರೀತಿ ಮುಂದುವರೆಯಿತು.
ಘಟನೆ ಹೇಗೆ ನಡೀತು, ಟ್ಯಾಂಕರ್ ಪಲ್ಟಿಯಾಗಿದ್ದು ಹೇಗೆ? ಟ್ಯಾಂಕರ್ ಮಾಲಿಕನ ವ್ಯತೆ ಏನು..? ಪೋಲಿಸ್ ಅಧಿಕಾರಿಯ ಕಣ್ಣಾಮುಚ್ಚಾಲೆ ಆಟ ಹೇಗಿತ್ತು? ಟ್ಯಾಂಕರ್ ಮಾಲಿಕ ಪಟ್ಟ ಕಷ್ಟವೇನೆಂಬುದರ ಕಂಪ್ಲೀಟ್ ಡೀಟೇಲ್ಸ್ ನಾಳೆ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಸುದ್ದಿವಾಹಿನಿಯಲ್ಲಿ ವೀಕ್ಷಿಸಿ…..