ಹುಬ್ಬಳ್ಳಿ: 500 ಕ್ಕೂ ಅಧಿಕ ಲೀಟರ್ ನಕಲಿ ಮದ್ಯವನ್ನು ತಯಾರಿಸುವ ಸ್ಪಿರಿಟ್ ನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ನಾಲ್ವರು ಆರೋಪಿಗಳನ್ನು ವಿದ್ಯಾನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದಿಂದ ಸ್ಪಿರಿಟ್ ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಖಚಿತ ಮಾಹಿತಿ ಮೇರೆಗೆ ಉಣಕಲ್ ಬಳಿ ದಾಳಿ ನಡೆಸಿ, ಮಹಾರಾಷ್ಟ್ರ ಮೂಲದ ಕಾರು ಹಾಗೂ ಆರೋಪಿಗಳಾದ ಅಜೀಜ್ ಬೇಪಾರಿ (27), ಮುಬಾರಕ್ ಬಸರಿ (25), ಸುನೀಲ್ ಬಳ್ಳಾರಿ (44), ಯಲ್ಲಪ್ಪ ಹಬೀಬ (40) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿ ಸುಮಾರು 60,500 ರೂ ಮೌಲ್ಯದ ಸ್ಪಿರಿಟ್ ತುಂಬಿದ ಒಟ್ಟು 17 ಕ್ಯಾನ್ ವಶಕ್ಕೆ ಪಡೆದಿದ್ದಾರೆ.
ಉತ್ತರ ವಿಭಾಗದ ಸಹಾಯಕ ಪೋಲಿಸ ಆಯುಕ್ತ ಶಿವಪ್ರಕಾಶ್ ನಾಯ್ಕ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಶ್ರೀಮಂತ ಹುಣಸಿಕಟ್ಟು ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ಶಿವಾನಂದ.ಎಮ್.ತಿರಕಣ್ಣವರ, ರಮೇಶ್ ಹಲ್ಲೇ, ಪರುಶರಾಮ ಹಿರಗಣ್ಣವರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ವಾಯ್.ಎಮ್. ಶೆಂಡ್ಗೆ, ಸಯ್ಯದಅಲಿ ತಹಶೀಲ್ದಾರ, ಮಂಜುನಾಥ ಏಣಗಿ, ಶರಣಗೌಡಾ ಮೂಲಿಮನಿ, ಪ್ರಕಾಶ ಠಕ್ಕಣ್ಣವರ, ವೆಂಕಟೇಶ್ ಸುರ್ವೆ ಇವರುಗಳ ಕಾರ್ಯಾಚರಣೆಗೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.