ಹುಬ್ಬಳ್ಳಿ: ಬೈಕ್ ಮೇಲೆ ಬಂದು ಹುಬ್ಬಳ್ಳಿಯ ಗಲ್ಫ್ ಮೈದಾನ ಬಳಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾದ ಐನಾತಿ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಕೇಶ್ವಾಪುರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಹುಬ್ಬಳ್ಳಿಯಲ್ಲಿ ಮಹಿಳೆಯ ಕೊರಳಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡ ಕೇಶ್ವಾಪೂರು ಠಾಣೆಯ ಇನ್ಸ್ಪೆಕ್ಟರ್ ಕೆ.ಎಸ್ ಹಟ್ಟಿ ಹಾಗೂ ಪಿಎಸ್ಐ ಸದಾಶಿವ ಕಾನಟ್ಟಿ ಅವರ ನೇತೃತ್ವದ ತಂಡ ರಾಣೆಬೆನ್ನೂರು ಮೂಲದ ಇಬ್ಬರ ಆರೋಪಿಗಳಾದ ಆಕಾಶ್ ಮುಧೋಳಕರ್ (23) ಹಾಗೂ ಪ್ರವೀಣ್ ಹಡಗಲಿ (27) ಎಂಬುವರನ್ನು ಬಂಧಿಸಿದ್ದಾರೆ. ತುಮಕೂರಿನ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಡ್ಯೂಕ್ ಬೈಕ್ ಕಳ್ಳತನ ಪ್ರಕರಣ ಈ ಕಳ್ಳರ ಮೇಲೆ ದಾಖಲಾಗಿದ್ದು, ಇದೆ ಬೈಕ್ ಬಳಕೆ ಮಾಡಿ ಹುಬ್ಬಳ್ಳಿಯಲ್ಲಿ ಸ್ನಾಚಿಂಗ್ ಕೃತ್ಯ ಎಸಗಿದ್ದರು.
ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಕೇಶ್ವಾಪೂರ್ ಠಾಣೆಯ ಪೊಲೀಸರು ತಮ್ಮ ಧಿಮಂತಿಕೆ ಹಾಗೂ ತಾಂತ್ರಿಕ ಸಹಾಯದಿಂದ ಆರೋಪಿಗಳನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ರಾಣೆಬೆನ್ನೂರು, ಉಡುಪಿ, ಶಿವಮೊಗ್ಗ ಹಾಗೂ ಮಣಿಪಾಲದಲ್ಲಿ ಕೂಡ ಬೈಕ್ ಕಳ್ಳತನ ಹಾಗೂ ಸರಗಳ್ಳತನದ ಪ್ರಕರಣಗಳು ದಾಖಲಾಗಿರುವ ಸತ್ಯಾಂಶ ಬೆಳಕಿಗೆ ಬಂದಿದೆ. ಕಳ್ಳತನದಲ್ಲಿ ನಿಪುಣರಾದ ಈ ಇಬ್ಬರ ಕಳ್ಳರನ್ನು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದು ಇವರುಗಳ ಕಾರ್ಯಕ್ಕೆ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.