ಗೌಸಮೊಹಿದ್ದೀನ್ ದಿವಾನ ಚಾಚಾ ದರ್ಗಾ ಸ್ಮರಣಾರ್ಥವಾಗಿ ಮುಸ್ತಫಾ ರಝಾ ಚಾರಿಟೇಬಲ್ ಟ್ರಸ್ಟ್ ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ ಅಭಿಮಾನಿ ಬಳಗದ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉಚಿತ ರಕ್ತ ಒರೀಕ್ಷೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.
ನಗರದ ಪೂಣಾ-ಬೆಂಗಳೂರು ರಸ್ತೆಯ ಬಿಡ್ನಾಳ ಕ್ರಾಸ್ ಬಳಿಯ ದರ್ಗಾದಲ್ಲಿ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯವನ್ನು ಮೂರು ಸಾವಿರ ಮಠದ ಶ್ರೀ ನಿರಂಜನ ಜಗದ್ಗುರು ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ನಗರದ ಮೌಲಾನಾ ಶಮಶುದ್ದೀನ್ ಖಾಜಿ ಗದ್ದಿನಶೀನ ಸೈಯ್ಯದಶಾ ಅಬ್ದುಲ್ ಖಾದ್ರಿ ಅವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯ ಮಾಡುವ ಮೂಲಕ ಉಚಿತ ರಕ್ತ ಪರೀಕ್ಷೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಮುಂಜಾನೆಯಿಂದ ಸಂಜೆಯವರೆಗೆ ಸುಮಾರು 24 ಕ್ಕೂ ಹೆಚ್ಚು ಜನ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.
ಇನ್ನೂ ಇದೇ ವೇಳೆ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷರಾದ ಮೊಹಮ್ಮದ್ ಶಫೀ ನಮ್ಮ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯವರಿಗೆ ನಿಗಮ ಮಂಡಳಿ ಘೋಷಣೆ ಹಾಗೂ ಗೌಸಮೊಹಿದ್ದೀನ್ ದಿವಾನ ಚಾಚಾ ದರ್ಗಾ ಸ್ಮರಣಾರ್ಥ ಉಚಿತ ರಕ್ತ ಪರೀಕ್ಷೆ ಹಾಗೂ ರಕ್ತದಾನ ಹಮ್ಮಿಕೊಳ್ಳಲಾಗಿತ್ತು. ಸುಮಾರು ಜನರು ಬಂದು ರಕ್ತ ಒರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ. ಈ ಕಾರ್ಯಕ್ರಮವನ್ನು ಆರು ತಿಂಗಳನಂತರ ಮತ್ತೊಮ್ಮೆ ನಡೆಸುವ ಯೋಚನೆ ಹೊಂದಿದ್ದೇವೆ. ಮನುಷ್ಯ ಜೀವನದಲ್ಲಿ ರಕ್ತದಾನ ತುಂಬಾ ಮುಖ್ಯ ಹಾಗಾಗಿ ಈ ಕಾರ್ಯಕ್ರಮ ನಡೆಸಿರುವುದಾಗಿ ಹೇಳಿದರು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಶಿಬಿರ ಸಂಯೋಜಕರಾದ ಭೀರಪ್ಪ ಪ್ರತಿಕ್ರಿಯೆ ನೀಡಿ, ಉತ್ತಮವಾದ ರೆಸ್ಪನ್ಸ್ ಸಿಕ್ಕಿದೆ. ರಕ್ತದಾನದಿಂದ ತುಂಬಾ ಸಹಕಾರಿಯಾಗಿದೆ.ನಾವು ಅವರು ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿದರು. ಈ ಸಂದರ್ಭದಲ್ಲಿ ಎಂ. ಪಾಟೀಲ್, ಹಸನಸಾಬ್ ಮುಜಾವರ್, ಮಹಮ್ಮದ್ ಶಫೀ ಕಟಾರೆ, ಅಬ್ದುಲ್ ಜಮಖಾನೆ, ಅಬ್ದುಲ್ ಖುದ್ದೂಸ್ ಪಾಟೀಲ್, ಜುನೇದ್ ಪಾಟೀಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.