ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿರೌಡಿಗಳು ಬಾಲಬಿಚ್ಚಿದ್ದು, ಕ್ಷುಲ್ಲಕ ಕಾರಣಕ್ಕೆ ಯುವಕನೊರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೇ ಮಾಡಿರುವ ಘಟನೆ ಕಸಬಾಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇಮ್ತಿಯಾಜ್ ಬನ್ನೂರು (19) ಹಲ್ಲೆಗೆ ಒಳಗಾದ ಯುವಕನಾಗಿದ್ದು, ಈತ ಬುಲ್ಡೋಜರ್ ನಗರದ ನಿವಾಸಿಯಾಗಿದ್ದಾನೆ. ಈತನ ಮೇಲೆ ಅದೇ ನಗರದ ಶಾದಾಬ್, ಅಫ್ತಾಬ್, ವಾಸೀಂ ಹಲ್ಲೇ ಮಾಡಿದವರಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಹಲ್ಲೇಗೆ ಒಳಗಾದ ಇಮ್ತಿಯಾಜ್ ಹಾಗೂ ಹಲ್ಲೆ ಮಾಡಿದ ತಂಡದ ನಡುವೆ ಜಗಳ ನಡೆದು ಅದು ಪೋಲಿಸ್ ಠಾಣೆಯ ಮೆಟ್ಟಿಲು ಏರಿರುತ್ತದೆ. ಬಳಿಕ ಪೋಲಿಸರು ರಾಜಿ ಸಂಧಾನ ಮಾಡಿ ಕಳಿಸಿರುತ್ತಾರೆ. ಆದರೆ ಶಾದಾಬ್ ಹಾಗೂ ಮತ್ತವರ ಸಹಚರರು ಇಷ್ಟಕ್ಕೆ ಸುಮ್ಮನಾಗದೇ ಇಂದು ಇಮ್ತಿಯಾಜ್ ಮೇಲೆ ಚಾಕುವಿನಿಂದ ಎದೆ ಸೇರಿದಂತೆ ಮತ್ತಿತರ ಭಾಗಕ್ಕೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೇ ಮಾಡಿದ್ದಾರೆ.

ಇನ್ನು ಗಂಭೀರವಾಗಿ ಗಾಯಗೊಂಡ ಇಮ್ತಿಯಾಜ್\’ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕಸಬಾಪೇಟೆ ಪೋಲಿಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಘಟನಾ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.