ಹುಬ್ಬಳ್ಳಿ: ಮಹಮ್ಮದ್ ದಾವೂದ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಟ್ಯಾಕ್ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಹೌದು, ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಆರೋಗ್ಯ ಸಮಿತಿಯ ಸದಸ್ಯನಾಗಿದ್ದ ಮಹಮ್ಮದ್ ದಾವೂದ್ ಅಲಿಯಾಸ್ \’MD\’ ಮೇಲೆಯೇ ಅಟ್ಯಾಕ್ ಮಾಡಲಾಗಿದೆ.
ಈತ ಗುರುವಾರ ರಾತ್ರಿ ಎಂದಿನಂತೆ ನಗರದ ರೈಲ್ವೆ ಸ್ಟೇಷನ್ ರಸ್ತೆಯ ಶಾಹಿಲ್ ಕಾಂಪ್ಲೆಕ್ಸ್\’ನಲ್ಲಿನ ಅಂಜುಮನ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ ಮರಳಿ ಮನೆಗೆ ಹೋಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ಖಾರದ ಪುಡಿಯನ್ನು ಕಣ್ಣಿಗೆ ಎರಚಿ, ತಲ್ವಾರ್ ಬಿಸಿದೆ. ಆದರೆ ಬೈಕ್ ಮುಂದೆ ಬೈಕ್ ಚಾಲನೆ ಮಾಡುತ್ತಿದ್ದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾನೆ.
ಆದರೆ ಮುಂದೆ ತೆರಳಿದಾಗ ಮತ್ತೊಂದು ಗುಂಪು ಅಟ್ಯಾಕ್ ಮಾಡಿದ್ದು, ಆಗ ತಲ್ವಾರ್ ಬೆನ್ನಿಗೆ ಬಿದ್ದಿದೆ. ಅದಾಗ್ಯೂ ಕೂಡಾ ಮಹಮ್ಮದ್ ದಾವೂದ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಯಾಮದಿಂದ ಪಾರಾಗಿದ್ದಾನೆ.
ಘಟನೆಯಲ್ಲಿ ಮಹಮ್ಮದ್ ಗಾಯಗೊಂಡಿದ್ದು, ಸದ್ಯ ಅಂಜುಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಏಳು ತಲ್ವಾರ, ಒಂದು ಆಟೋ, ಖಾರದ ಪುಡಿ ವಶಕ್ಕೆ ಪಡೆದು, ಕೆಲವೊಂದಿಷ್ಟು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮಹಮ್ಮದ್ ದಾವೂದ್ ಇತ್ತಿಚೆಗೆ ರಾಜಕಾರಣ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಇದರಿಂದಾಗಿ ಸಹಜವಾಗಿಯೇ ವಿರೋಧಿಗಳು ಕೂಡಾ ಹೆಚ್ಚಿದ್ದರು. ಈ ಹಿನ್ನೆಲೆಯಲ್ಲಿ ದಾವೂದ್ ಬೆಳವಣಿಗೆ ಸಹಿಸದೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.