ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಬದಿಯಲ್ಲಿ ನಿಂತ ಲಾರಿ ಒಂದರಲ್ಲಿ ಓರ್ವ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯು ಗದಗ ಜಿಲ್ಲೆಯ ಡಂಬಳ ಗ್ರಾಮದ 40 ವರ್ಷದ ಈರಣ್ಣ ಎಂದು ತಿಳಿದುಬಂದಿದೆ. ಇಂದು ಮಧ್ಯಾನ ಸುಮಾರು ಎರೆಡು ಘಂಟೆಗೆ
ಲಾರಿಯ ಮಾಲಿಕ ಅಲ್ಲಾಬಕ್ಷ ಸಹಜವಾಗಿ ಲಾರಿ ಹತ್ತಿರ ಹೋದ ಸಂದರ್ಭದಲ್ಲಿ ಶವದ ದುರ್ವಾಸನೆ ಬಂದ ತಕ್ಷಣ ಲಾರಿಯನ್ನು ಪರಿಶೀಲಿಸಿದಾಗ ಕ್ಯಾಬಿನ್ ಮೇಲೆ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಹಿಂದೆ ಇದೆ ಲಾರಿಯ ಡ್ರೈವರ್ ಆಗಿ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಲಾರಿಯ ಮಾಲೀಕ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಬೇಟಿ ನೀಡಿ ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.