ಹುಬ್ಬಳ್ಳಿ: ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾವೂದ್ ನದಾಫ್ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ತನಿಖೆ ಚುರುಕುಗೊಳಿಸಿದ್ದು, ಇದೀಗ ಮತ್ತೆ ಮೂರು ಜನರನ್ನು ಬಂಧನ ಮಾಡಿದ್ದಾರೆ.
ಹೌದು, ಮಾ.7 ರಂದು ರಾತ್ರಿ ಅಂಜುಮನ್ ಆಸ್ಪತ್ರೆ ಮುಂಭಾಗದಲ್ಲಿ ಏಕಾಏಕಿ ಜನರ ಗುಂಪೊಂದು ದಾವೂದ್ ಕಣ್ಣಿಗೆ ಖಾರದ ಪುಡಿ ಎರಚಿ ತಲ್ವಾರ್\’ದಿಂದ ಕೊಲೆಗೆ ಪ್ರಯತ್ನಿಸಿತು. ಆದರೆ ದಾವೂದ್ ಪ್ರಾಣಾಪಾಯದಿಂದ ಪಾರಾಗಿ, ತನ್ನ ಮೇಲೆ ಆದ ಕೊಲೆಯತ್ನ ಕುರಿತು ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
https://youtu.be/19KKY9kTsTM?si=j_LbdOEIjDCns73W
ಅದರಂತೆ ಇದೀಗ ಇನ್ಸ್ಪೆಕ್ಟರ್ ರಫೀಕ್ ತಹಶಿಲ್ದಾರ ನೇತೃತ್ವದ ತಂಡ ತನಿಖೆ ನಡೆಸಿ ಮೊದಲು 8 ಜನರನ್ನು ಬಂಧಿಸಿ, ಡ್ರೀಲ್ ಮಾಡಿದ್ದಾರೆ. ಆಗ ಕೃತ್ಯಕ್ಕೆ ಮತ್ತಷ್ಟು ಜನರು ಶಾಮಿಲಾಗಿರುವುದನ್ನು ತಿಳಿಸಿದ್ದಾರೆ. ಇದೀಗ ಮತ್ತೆ 3 ಜನರನ್ನು ಬಂಧಿಸಿದ್ದಾರೆ. ಇನ್ನೂ ಕೆಲ ಜನ ತಲೆಮರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಅವರ ಹೆಡೆಮುರಿ ಕಟ್ಟಲು ಪೋಲಿಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.
ಇಂದು ಖಾಲಾ ರಸೂಲ್, ಜುನೈದ್, ಅಲ್ತಾಪ್ ಕುಟ್ರಾ ಎಂಬಾತರನ್ನು ಬಂಧಿಸಲಾಗಿದೆ.
ದಾವೂದ್ ಮೇಲೆ ಅಟ್ಯಾಕ್ ನಡೆಸಿದ್ದು ಇವರೇ ನೋಡಿ…