ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ನಾಪತ್ತೆಯಾಗಿರುವ ಪ್ರಕರಣವನ್ನು ವಿದ್ಯಾನಗರ ಠಾಣೆಯ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಕಳೆದ ಕೆಲವು ದಿನಗಳ ಹಿಂದೆ ಬೆಂಗೇರಿಯ ಟೀಚರ್ಸ್ ಕಾಲೋನಿಯ ನಿವಾಸಿ ವೆಂಕಟೇಶ ಕುಷ್ಟಗಿ (58) ಎಂಬಾತ ಹುಬ್ಬಳ್ಳಿ ಹೊರವಲಯದ ಕುಸುಗಲ್ ರಸ್ತೆಯ ಸಿದ್ದಾರೋಢಮಠದ ಹತ್ತಿರ ಬೈಕ್ ತೆಗೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವೆಂಕಟೇಶನ ತಲೆಗೆ ಪೆಟ್ಟಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ, ಆದರೆ ವೆಂಕಟೇಶ ಕುಷ್ಟಗಿ ಮಾ.7 ರಂದು ಬೆಳಿಗ್ಗೆ 6 ಕ್ಕೆ ಏಕಾಏಕಿ ಕಿಮ್ಸ್ ಆಸ್ಪತ್ರೆಯ ವಾರ್ಡ್ ನಂಬರ್ 105 ರಿಂದ ನಾಪತ್ತೆಯಾಗಿದ್ದಾನೆ. ಬಳಿಕ ವೆಂಕಟೇಶನ ಕುಟುಂಬಸ್ಥರು ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ನಾಪತ್ತೆಯ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಡಿ.ಕೆ.ಪಾಟೀಲ್ ಹಾಗೂ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಮಾರ್ಗದರ್ಶನದಲ್ಲಿ ಕ್ರೈಂ ಸಿಬ್ಬಂದಿಗಳಾದ ಸಯ್ಯದ್ ಅಲಿ ತಹಶಿಲ್ದಾರ ಮತ್ತು ಪ್ರಕಾಶ ಮುಷ್ಟೂರ್ ತನಿಖೆ ಕೈಗೊಂಡು ಹುಬ್ಬಳ್ಳಿಯಿಂದ ಧಾರವಾಡವರೆಗೆ ಬಸ್ಸು, ಸಿಸಿಟಿವಿಯನ್ನು ಜಾಲಾಡಿ ವೆಂಕಟೇಶ ಕುಷ್ಟಗಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸಿಬ್ಬಂದಿಗಳ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.