ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿ ಈಗಷ್ಟೇ ನಡೆದಿದೆ.
ಘಟನೆಯಲ್ಲಿ ವರೂರು ಗ್ರಾಮದ ಸುಧೀರ ಹುಲಗಣ್ಣವರ್ (32) ಸಾವನ್ನಪ್ಪಿದು, ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನನ್ನು ಅದೇ ಗ್ರಾಮದ ಸಾಗರ್ ಮಹಾದೇವಪ್ಪ ಗಬ್ಬನ್ನವರ (28) ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಗ್ರಾಮದ ಜಗದೀಶ್ ದಾಬಾ ಹತ್ತಿರ ಹಣಕಾಸಿನ ವಿಚಾರಕ್ಕೆ ಸುಧೀರ್ ಮತ್ತು ಸಾಗರ್ ನಡುವೆ ಜಗಳ ಆರಂಭವಾಗಿದ್ದು, ಬಳಿಕ ಸಾಗರ್ ಸುಧೀರ್\’ನನ್ನು ಕೊಲೆಗೈದು ಪರಾರಿಯಾಗಲು ಯತ್ನಿಸಿದ್ದಾನೆ.
ಆಗ ಗ್ರಾಮದ ಜನರು ಸಾಗರ್ ನನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಪರಿಣಾಮವಾಗಿ ಸಾಗರ್ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಇನ್ನು ಸ್ಥಳಕ್ಕೆ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನನವರ ಮತ್ತವರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನಾ ಸಂಬಂಧ ಇನ್ನಷ್ಟು ಹೆಚ್ಚಿನ ಮಾಹಿತಿ ಪೋಲಿಸರಿಂದ ತಿಳಿದುಬರಬೇಕಿದೆ.