ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೋಲಿಸರು ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಕೇಶ್ವರ ಮೂಲದ ಸೈಫ್ ಸುತಾರ್ (28) ಎಂಬಾತನೇ ಬಂಧಿತನಾಗಿದ್ದು, ಈತ ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಬಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಸಿಗುತ್ತಿದ್ದಂತೆಯೇ ಸಿಇಎನ್ ಕ್ರೈಮ್ ಪೋಲಿಸ್ ಠಾಣೆಯ ಎಸಿಪಿ ಒಡೆಯರ್ ನೇತೃತ್ವದಲ್ಲಿ ಪಿಐ ಬಿ.ಕೆ.ಪಾಟೀಲ್ ಹಾಗೂ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಅಂದಾಜು 5 ಲಕ್ಷ ಮೌಲ್ಯದ 5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಕುರಿತು ಎನ್\’ಡಿಪಿಎಸ್ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಸೈಫ್ ಸುತ್ತಾರ ಈ ಹಿಂದೆಯೂ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದು, ಪುಣೆಯಲ್ಲಿ ಅತಿಯಾದ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸಂಜು ಕುರಹಟ್ಟಿ, ಚಂದ್ರಶೇಖರ ಕಂಬಾಳಿಮಠ, ಸುರೇಶ ಕುರಿ, ಗಿರೀಶ ಬಡಿಗೇರ್, ರವಿ ಕೋಳಿ, ಶಿವಾನಂದ ಮಾನಕರ್, ಫಕ್ಕಿರೇಶ ಸುಣಗಾರ ಸೇರಿದಂತೆ ಮತ್ತಿತರರು ತಂಡದಲ್ಲಿ ಇದ್ದಾರೆ.
ಸಂದೀಪ್ ಪೆಂಡಮ್ ಬಂಧನ: ಸಿ.ಇ.ಎನ್.ಕ್ರೈಮ್ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ಚೇತನಾ ಕಾಲೋನಿಯ ನಿವಾಸಿ ಸಂದೀಪ್ ಪೆಂಡಮ್ (28) ಎಂಬಾತ ಗದಗ ರಸ್ತೆಯ ಚಾಲುಕ್ಯ ಹಾಲ್ ಹತ್ತಿರ ಮಾ.19 ರಂದು ಗಾಂಜಾ ಮಾರಾಟ ಮಾಡುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 19.800 ರೂ ಮೌಲ್ಯದ 690 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು, ಪ್ರಕರಣವನ್ನು ದಾಖಲಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ವಾಯ್ಸ್
ಹುಬ್ಬಳ್ಳಿ.