ಹುಬ್ಬಳ್ಳಿ: ಹೋಳಿ ಹಬ್ಬದ ಆಚರಣೆಯಲ್ಲಿ ಮಿಂದೆಂದು ಇನ್ನೇನು ಮನೆಗೆ ತೆರಳುತ್ತಿದ್ದ ಯುವಕರು ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ-ಧಾರವಾಡ ಆರ್\’ಟಿಓ ಕಚೇರಿಯ ಹತ್ತಿರ ನಡೆದಿದೆ.
ಘಟನೆಯಲ್ಲಿ ಧಾರವಾಡದ ಗುಲಗಂಜಿಕೊಪ್ಪದ ನಿವಾಸಿಗಳಾದ ಮಾರುತಿ, ಮಂಜುನಾಥ ಹಾಗೂ ನಾಗರಾಜ್ ಎಂಬಾತರಿಗೆ ಗಂಭೀರವಾದ ಗಾಯಗಳಾಗಿದ್ದು, ಇದರಲ್ಲಿ ಮಾರುತಿ ಎಂಬಾತ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಇಂದು ಕಾಮದಹನ ನಿಮಿತ್ತವಾಗಿ ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಳಿ ಆಚರಣೆ ಇತ್ತು. ಅದರಂತೆ ಬಣ್ಣದ ಓಕಳಿ ಆಡಿ, ಪುನಃ ಮನೆಯತ್ತ ತೆರಳುತ್ತಿದ್ದ ವೇಳೆ ಆರ್\’ಟಿಓ ಹತ್ತಿರ ಬೈಕ್ ನಿಯಂತ್ರಣ ಮಾಡಲಾಗದೇ ರೋಡ್ ಹಂಪ್ ಜಿಗಿಸಿ ಪಲ್ಟಿಹೊಡೆದು ಮೂವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಸದ್ಯ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಉತ್ತರ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.