ಹುಬ್ಬಳ್ಳಿ: ವಿಜಯಪುರ, ಧಾರವಾಡ ಜಿಲ್ಲೆ ಸೇರಿದಂತೆ ವಿವಿದೆಢೆ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಗೋಕುಲರೋಡ್ ಪೋಲಿಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿಯ ಪ್ರಕಾಶ ಕಾಂಬಳೆ (37), ವಿಜಯಪುರ ಜಿಲ್ಲೆಯ ಹೊನ್ನಳ್ಳಿ ಅಕ್ಕಮಹಾದೇವಿ ಕಟ್ಟೆ ಹತ್ತಿರ ನಿವಾಸಿ ವಿಷ್ಣು ನಂದ್ಯಾಳ (40) ಎಂಬಾತರನ್ನು ಬಂಧನ ಮಾಡಲಾಗಿದ್ದು, ಬಂಧಿತರಿಂದ 11 ದ್ವಿ- ಚಕ್ರವಾಹನಗಳ ವಶಕ್ಕೆ ಪಡೆಯಲಾಗಿದೆ.
ಆರೋಪಿತರು ಗೋಕುಲರೋಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 4, ಹಳೇಹುಬ್ಬಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 3, ವಿದ್ಯಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 1, ಬೆಂಡಿಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 1 ಹಾಗೂ ವಿಜಯಪುರ ಶರಹ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್ ಗಳನ್ನು ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದು, ಇದೀಗ ಪೋಲಿಸರು ಬಂಧಿತರಿಂದ ಒಟ್ಟು 7.80 ಲಕ್ಷ ರೂ ಮೌಲ್ಯದ 11 ಬೈಕ್\’ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಗೋಕುಲರಸ್ತೆಯ ಡಾಲರ್ಸ್ ಕಾಲೋನಿ ಬಳಿಯಲ್ಲಿ ನಿಲ್ಲಿಸಿದ ಬೈಕ್ ಕಳ್ಳತನದ ಬಗ್ಗೆ ವಿದ್ಯಾನಗರದ ನಿವಾಸಿ ನಾಗರಾಜ ಕಲಗುದರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ.
ಇನ್ಸಪೆಕ್ಟರ್ ಪ್ರವೀಣ ನೀಲಮ್ಮನವರ ನೇತೃತ್ವದಲ್ಲಿ ಪಿಎಸ್ಐ ದೇವೇಂದ್ರ ಮಾವಿನಂಡಿ, ಎಎಸ್ಐ ಜಿ.ಸಿ.ರಜಪೂತ, ಎಎಸ್ಐ ಆರ್.ಆರ್.ಹೊಂಕಣದವರ, ಸಿಬ್ಬಂದಿಗಳಾದ ಸಿ.ಟಿ.ನಡುವಿನಮನಿ, ವಿ.ಎಸ್.ಗುಡಗೇರಿ, ಪ್ರಕಾಶ ತಗಡಿನಮನಿ, ಜಗದೀಶ್ ಮತ್ತಿಗಟ್ಟಿ, ಎಲ್.ವಾಯ್.ನಾಯಕ, ಎಂ.ಎಂ.ಬೆನ್ನೂರು, ಶರಣಪ್ಪ ಕೋರಿ, ಸುರೇಶ ಕೋಲಿ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಎಂ.ಎಸ್.ಚಿಕ್ಕಮಠ, ರವಿ ಗೋಮಪ್ಪನವರ, ರಾಘವೇಂದ್ರ ಭಡಂಕರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗೋಕುಲರೋಡ್ ಪೋಲಿಸರ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.