ಚಾಲಕನ ನಿಯಂತ್ರಣ ತಪ್ಪಿ ಕಾರವೊಂದು ಪಲ್ಟಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ಹಲಗೇರಿ ಬೈಪಾಸ್ ಬಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ತಿರುಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುರೇಶ ವೀರಪ್ಪ ಜಡಿ, ಐಶ್ವರ್ಯ ಈಶ್ವರ ಬಾರ್ಕಿ, ಚೇತನ ಪ್ರಭುರಾಜ ಸಮಗಂಡಿ, ಪವಿತ್ರಾ ಪ್ರಭುರಾಜ ಸಮಗಂಡಿ ಎಂಬವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಚನ್ನವೀರಪ್ಪ ಜಾರ್, ಸಾವಿತ್ರಿ ಜಾರ್, ವಿಕಾಸ್ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಂಗಡಿ ಇವರುಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್.ಎಸ್.ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ರಾಣೇಬೆನ್ನೂರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.