ಹುಬ್ಬಳ್ಳಿ: ಕ್ಷುಲಕ ವಿಚಾರಕ್ಕೆ ಜಗಳ ತೆಗೆದು ಸಹೋದರ ಇಬ್ಬರ ಮೇಲೆ ಗುಂಪೊಂದು ಹಲ್ಲೇ ಮಾಡಿ ಘಟನೆ ಹಳೇ ಹುಬ್ಬಳ್ಳಿಯ ಗುರುನಾಥ್ ನಗರದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ವ್ಯಕ್ತಿಯ ಹೆಸರು ನೂರ್ ಅಹಮದ್ ಕುಂದಗೋಳ ವೃತಿಯಲ್ಲಿ ಸೆಂಟ್ ರಿಂಗ್ ಕೆಲಸ ಮಾಡುತ್ತಿರುವನು. ತನ್ನ ಮಗನನ್ನು ಶಾಲೆಗೆ ಬಿಟ್ಟು ಬರುವ ಸಮಯದಲ್ಲಿ ಅಲ್ಲೇ ಇದ್ದ ಆಟೋ ಚಾಲಕ ಅಲ್ತಾಫ್ ಕೈ ಸೊನ್ನೆ ಮಾಡಿ ಆಟೋ ಬೇಕಾ ಅಂತ ಏರು ದ್ವನಿಯಲ್ಲಿ ಕೇಳಿದ್ದಾನೆ, ಇದಕ್ಕೆ ನೂರ್ ಅಹ್ಮದ್ ಯಾಕೆ ಹಾಗೆ ಕರಿಯುತ್ತಿಯ ಮರ್ಯಾದೆ ಕೊಟ್ಟು ಮಾತನಾಡು ಅಂದಿದ್ದಕ್ಕೆ, ಲೆ ನಾನು ಹೀಗೆ ಮಾತನಾಡುವುದು ಅಂತ ಜೊತೆಗಿದ್ದ ಆತನ ಸ್ನೇಹಿತನ ಜೊತೆ ಸೇರಿಕೊಂಡು ನೂರ್ ಅಹಮದ್ ಮೇಲೆ ಹಲ್ಲೆ ಮಾಡಿದ್ದಾನೆ.
ಇದಾದ ಬಳಿಕ ನೂರ್ ಅಹಮದ್ ತನ್ನ ಕೊರಳಲ್ಲಿದ್ದ ಚೈನ್ ಕಾಣೆಯಾಗಿದನ್ನು ಗಮನಿಸಿ ತನ್ನ ತಮ್ಮನಾದ ರೋಷನ್ ಜಮೀರ್ ನನ್ನು ಕರೆಸಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯ ಬಳಿ ಹೋಗಿದ್ದಾನೆ. ಆಗ ದಯವಿಟ್ಟು ನನ್ನ ಚೈನ್ ನನಗೆ ವಾಪಸ್ ಕೊಡು ಅಂತ ಕೇಳಿದ್ದಾನೆ. ಅದಕ್ಕೆ ಅಲ್ತಾಫ್ ಹಾಗು ಆತನ ಜೊತೆ ಇದ್ದ 10 ರಿಂದ 12 ಜನರ ಗುಂಪು ಸೇರಿ ಮತ್ತೆ ನೂರ್ ಅಹಮದ್ ಹಾಗು ಆತನ ಸಹೋದರ ರೋಷನ್ ಜಮೀರ್ ಮೇಲೆ ಹಲ್ಲೆ ಮಾಡಿದ್ದಾರಂತೆ. ಹಲ್ಲೆ ಮಾಡಿದವರಲ್ಲಿ ಹಜರು, ಅಲ್ತಾಫ್, ಬಾಬಾಜಾನ್ ಹಾಗು ಆಸೀಫ್ ಗುಂಜಾಲ್ ಅವರು ಇದ್ದರೂ ಅಂತ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ
ಹಲ್ಲೆಗೆ ಒಳಗಾದ ಸಹೋದರನ್ನು ಸ್ಥಳೀಯರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಕುರಿತು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.