ಹುಬ್ಬಳ್ಳಿ: ಜೀವನದಲ್ಲಿ ಜಿಗುಪ್ಸೆಗೊಂಡು ಟ್ರಾಫಿಕ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಾಗಪ್ಪ ಹಂಚಿನಮನಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಸಿ ಎಸ್ ಬಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಮತ್ತೆ ವೈದ್ಯಕೀಯ ಕಾರಣಕ್ಕೆ ರಜೆಯನ್ನು ತಗೆದುಕೊಂಡಿದ್ದರು ಅಂತ ತಿಳಿದು ಬಂದಿದೆ.
ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ, ಈ ಘಟನೆ ಕುರಿತು ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.