ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊರ್ವನ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ನಡೆದಿರುವ ಘಟನೆ ಶರಹ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಟೌನ್ ಹಾಲ್ ಬಳಿಯ ಸಣ್ಮನ್ ರೇಡಿಯಂ ಅಂಗಡಿಯಲ್ಲಿ ಈ ವೊಂದು ಘಟನೆ ನಡೆದಿದೆ. ವಾಹೀದ್ ಕುಸುಗಲ್ ಎಂಬಾತನ ಮೇಲೆಯೇ ಹಲ್ಲೆಯಾಗಿದ್ದು. ಶಾನು ಪೂವಕ್ವಾಳೆ ಹಾಗೂ ಯೂಸುಫ್ ಕುಸುಗಲ್ ಎಂಬಾತರು ಹಲ್ಲೇ ನಡೆಸಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ ಶಾನೂ ಹಾಗೂ ವಾಹೀದ್ ನಡುವೆ ಕ್ಷುಲ್ಲಕ ವಿಚಾರಕ್ಕೆ ತಂಟೆ ನಡೆದಿದ್ದು, ಆಗ ಸ್ಥಳೀಯರು ಹಾಗೂ ಹಿರಿಯರು ಸೇರಿ ಜಗಳ ಬಗೆಹರಿಸಿ, ಇಬ್ಬರಿಗೂ ತಿಳುವಳಿಕೆ ಹೇಳಿ ಕಳಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಶಾನೂ ಇಂದು ಗುರುವಾರ ಕೂಡಾ ವಾಹೀದ್ ಜೊತಗೆ ತಂಟೆ ತಗದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ವಾಹೀದ್ ಮೇಲೆ ಹರಿತವಾದ ಆಯುಧದಿಂದ ತಲೆ ಬಾಗಕ್ಕೆ ಹಲ್ಲೆ ಮಾಡಿದ್ದಾನೆ. ಪರಿಣಾಮ ವಾಹೀದ್ ತಲೆಗೆ ಗಂಭೀರವಾದ ಗಾಯಗಳಾಗಿವೆ. ಇದೇ ವೇಳೆ ಜಗಳ ಬಿಡಿಸಲು ಬಂದ ನದೀಮ್ ಮಂಗಳೂರು ಎಂಬಾತನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಶಹರ ಠಾಣೆಯ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ನೇತೃತ್ವದ ತಂಡ ಹಲ್ಲೆ ಮಾಡಿದ ಆರೋಪಿಗಳಿಗೆ ಬಲೆ ಬೀಸಿ ಕೆಲವೇ ಘಂಟೆಗಳಲ್ಲಿ ಬಂಧನ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನೇ ಆಗಲಿ ಅವಳಿ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಪುಡಿರೌಢಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನಸಾಮಾನ್ಯರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಲಿಸರು ಅಪರಾಧಗೈದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡರೂ ಕೂಡ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ಪೋಲಿಸ್ ಇಲಾಖೆಗೆ ಸವಾಲ್ ಆಗಿ ಪರಿಣಮಿಸಿದೆ.