ಅಪರಿಚಿತರಿಂದ ವ್ಯಕ್ತಿಯೋರ್ವನಿಗೆ ಮಾರಕಾಸ್ತ್ರದಿಂದ ಕೊಲೆ ಯತ್ನ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಸವಣೂರಿನಲ್ಲಿ ನಡೆದಿದೆ.
ಗ್ಯಾರೇಜ್ ಮೆಕ್ಯಾನಿಕಲ್ ಅಬೀದ್ ಎಂಬ ವ್ಯಕ್ತಿಯ ಮೇಲೆ ಕೊಲೆಗೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸವಣೂರಿನ ದುರ್ಗಾಗುಡಿ ಹಿಂದುಗಡೆಯಿರುವ ಮೈದಾನದಲ್ಲಿ ಗುರುವಾರ ಸಂಜೆ ಬೈಕ್ ರಿಫೇರಿ ಮಾಡಲಿಕ್ಕೆ ಬಂದಂತಹ ಸಂದರ್ಭದಲ್ಲಿ ಟೀ ಕುಡಿಯೋಣ ಎಂಬ ನೆಪ ಹೇಳಿ ಕರೆದುಕೊಂಡು ಹೋಗಿ ಮಾರಕಾಸ್ತ್ರದಿಂದ ಕೊಲೆಗೆ ಯತ್ನ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಆಬೀದ್ ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತಂತೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ತನಿಖೆ ಮುಂದುವರೆದಿದೆ.