ಹುಬ್ಬಳ್ಳಿ ಬ್ರೇಕಿಂಗ್: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರೋರ್ವರ ಪುತ್ರನನ್ನು ಸಾರಾಯಿ ಕುಡಿಸಿ ಹತ್ಯೆ.. ಮಾಡಿರುವ ಘಟನೆ ನಗರದ ಲೋಹಿಯಾನಗರಲ್ಲಿ ನಡೆದಿದೆ.
ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಪುತ್ರ ಆಕಾಶ ಮಠಪತಿ ಎಂಬುವರ ಹತ್ಯೆಯಾಗಿದೆ.
ಶನಿವಾರ ಸಂಜೆ ಅಪರಿಚಿತರು ಹತ್ಯೆ ಮಾಡಿದ್ದು, ಎನ್ನಲಾಗಿದ್ದು, ಹತ್ಯೆ ಮಾಡಿದವರು ಯಾರು? ಘಟನೆ ಕಾರಣ ಏನು ಎಂಬ ಮಾಹಿತಿ ತಿಳಿದು ಬರಬೇಕಿದೆ.
ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಡಿಸಿಪಿ ಕುಶಾಲ್ ಚೌಕ್ಸೆ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.