ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಅಲಿಶೇಖ್ ಅವರ ನೇತೃತ್ವದ ತಂಡ ಮಂಟೂರ ರಸ್ತೆಯ ರೈಲ್ವೇ ಗೇಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಆಗ ಅವರ ಬಳಿ ಗಾಂಜಾ ದೊರೆತಿದೆ.
ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ಮೂರು ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರಾದ ವೀರಾಪುರ ಓಣಿಯ ಮೆಹಬೂಬ್ ಸಾಬ್ ಹೊನ್ನಳ್ಳಿ, ರಾಮಲಿಂಗೇಶ್ವರನಗರದ ಚಂದ್ರಶೇಖರ್ ಜನ್ನಲಗುಟ್ಟಾ, ಕೇಶ್ವಾಪೂರದ ತೌಶಿಫ್ ಹೊನ್ನಳ್ಳಿ ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಂಡಿಗೇರಿ ಠಾಣೆಯ ಪಿಎಸ್ಐ ಶರಣು ದೇಸಾಯಿ, ಸಿಬ್ಬಂದಿಗಳಾದ ಹನುಮಂತ, ಅಂಬಿಗೇರ, ರಾಮು, ಸೋಮು ಮತ್ತು ಬಸು ಅವರು ಭಾಗಿಯಾಗಿದ್ದು, ಇವರ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತರು ಶ್ಲಾಘಿಸಿದ್ದಾರೆ