ಹುಬ್ಬಳ್ಳಿ: ಅರಿವೇ ಗುರು ಎನ್ನುವ ಗಾದೆ ಮಾತು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಿರುವ ಈ ಯುವಕರ ತಂಡ ತಾವು ಕಲೆತ ಕೃಪಾದಾನಂ ಶಾಲೆಯ ಕಾಳಜಿ ನೋಡಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ಸರ್ಕಾರದಿಂದ ಬರುವ ಕ್ರಿಡಾ ಸಾಮಗ್ರಿಗಳ ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ದುಡಿಮೆಯಲ್ಲಿ ಉಳಿತಾಯ ಮಾಡಿ ಶಾಲೆಯ ವಿದ್ಯಾರ್ಥಿಗಳಿಗೆ ವ್ಹಾಲಿಬಾಲ್ ,ಪುಟ್ಬಾಲ್ ಹಾಗು ರಿಂಗ್ ಮತ್ತು ನೆಟ್ ಹಾಗು ಸ್ಕಿಪಿಂಗ್ ಉಪಕರಣಗಳ ಜೊ ತೆಅಲ್ಲಿಯ ವಿದ್ಯಾರ್ಥಿಗಳಿಗೆ ಬೇಕಾಗುವ ಸಾಮಗ್ರಿಗಳನ್ನ ಹಂಚಿ ತಾವು ಕಲಿತ ಶಾಲೆಯ ಬಗ್ಗೆ ಕಾಳಜಿಯನ್ನ ತೋರಿಸಿರುವದು ಇನ್ನೊಬ್ಬರಿಗೆ ಮಾದರಿಯ ನಡೆಯಾಗಿದೆ..
ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ ಈ ಮಾದರಿಯ ನಡೆಯನ್ನ ಕಂಡ ಶಾಲೆಯ ಮುಖ್ಯೋಪಾಧ್ಯಾಯರು 2004 ರ ಈ ಬ್ಯಾಚಿನ ವಿದ್ಯಾರ್ಥಿಗಳಾದ ಪಿ ಶೇಖರ್ ಹಾಗು ರಂಗಸ್ವಾಮಿ ಮತ್ತು ಜಯಲಕ್ಷ್ಮಿ ತಮ್ಮ ಶಾಲೆಯ ಕಾಳಜಿಗೆ ಸಂತಸ ಜೊತೆ ನಾವು ಕಲಿಸಿದ ವಿದ್ಯಾರ್ಥಿಗಳು ಸಮಾಜಿಕ ಕಳಕಳಿಯನ್ನ ಜೊತೆಗುಡಿಸಿಕೊಂಡು ಇಂತಹ ಕೆಲಸಗಳು ಇನ್ನು ಹೆಚ್ಚಾಗಿ ಮಾಡಲಿ ಮತ್ತು ಇವರ ಕಾರ್ಯವನ್ನು ಉಳಿದ ಯುವ ಜನೆತೆಗೆ ಮಾದರಿಯಾಗಲಿ ಎಂದು ತಿಳಿಸಿದರು.