ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ ಠಾಣೆಯ ಪೊಲೀಸರು ನಗರದ ಗುಡ್ ಶೆಟ್ ರೋಡ್ ಬುದ್ಧ ವಿಹಾರ ಹತ್ತಿರ ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವಾಜ್, ಹಜರತ್, ಅಹ್ಮದ್ ಖಾನ್, ಪಾಂಡು, ಶಂಕರನಾಗ್, ಆಕಾಶ, ಅಜುರುದ್ದೀನ್, ವೆಂಕಟೇಶ್, ಮಹಮ್ಮದ್ ಗೌಸ್, ಸರ್ಪರಾಜ್, ನೂರ ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಎಂಬಾತರೇ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಸುಮಾರು ಎರೆಡು ಲಕ್ಷ ಕಿಮ್ಮತ್ತಿನ 1 ಕೆಜಿ 127 ಗ್ರಾಂ ಗಾಂಜಾ, ಎರೆಡು ಬೈಕ್ ಹಾಗೂ ಮೂರು ಮೊಬೈಲ್ ಹಾಗೂ 6 ಸಾವಿರ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೂ ಮಿರಜ್ ನಿಂದ ಗಾಂಜಾ ತಂದಿದ್ದ ನವಾಬ್ ಎಂಬಾತ ಈ ವೇಳೆ ದಾವಣಗೆರೆಯಿಂದ ಬಂದ ವ್ಯಕ್ತಿಗೆ ಮಾರಾಟಕ್ಕೆ ಮುಂದಾಗಿದ್ದ ಎನ್ನಲಾಗಿದ್ದು,, ಖಚಿತ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಕಳೆದ ಒಂದು ವಾರದ ಅವಧಿಯಲ್ಲಿ ಗಾಂಜಾ ಮಾರಾಟ ಮತ್ತು ಖರೀದಿ ಮಾಡಲು ಮುಂದಾಗಿದ್ದ 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಶಹರ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಪಿಎಸ್ಐ ಮಾರುತಿ ನೇತೃತ್ವದ ತಂಡದ ಕಾರ್ಯವೈಖರಿಯನ್ನು ಹು-ಧಾ ಪೊಲೀಸ್ ಕಮೀಷನರ್ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.