ಧಾರವಾಡ : ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬರುವಂತಹ ದಾಬಾಗಳಿಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತಿದ್ದ ಖದೀಮರನ್ನು ಬಂಧನ ಮಾಡುವಲ್ಲಿ ಗರಗ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹೊಸತೇಗೂರ ಬಳಿ ವ್ಯಕ್ತಿ ಓರ್ವನನ್ನು ತಡೆದು ದರೋಡೆ ಮಾಡಿ ಪರಾರಿಯಾಗಿದ್ದ ಏಳು ಜನ ಆರೋಪಿಗಳ ಪೈಕಿ ಆರು ಜನರನ್ನು, ಕೇವಲ 24 ಘಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಹೌದು…ಆಗಸ್ಟ್ 2 ರಂದು ರಾತ್ರಿ ಹೊಸ ತೇಗೂರು ಗ್ರಾಮದ ಗ್ರೀನ ದಾಬಾ ಬಳಿ ದರೋಡೆ ಮಾಡಿ ಪರಾರಿಯಾದ ಕಿತ್ತೂರ ನಿವಾಸಿ ನವೀನ ಹುಣಶ್ಯಾಳ, ಸಂತೋಷ ಬಿಡಿಮಠ, ಅಕ್ಷಯ ಕೋಳಿ, ಸಾಗರ ಗುಂಜಿ ಹಾಗೂ ಮಲ್ಲಾಪುರದ ವಿರುಪಾಕ್ಷ ಎಮ್ಮಿ, ಸಾಗರ ಗುಂಜಿ ಎಂಬುವರನ್ನ ಬಂಧಿಸಿ, ತಲೆಮರೆಸಿಕೊಂಡ ಇನ್ನೋರ್ವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಏರ್ಟಿಗಾ ಕಾರ ಹಾಗೂ 25 ಸಾವಿರ ನಗದು ಹಣವನ್ನು ವಶಕ್ಕೆ ಪಡೆಡಿದ್ದಾರೆ.
ಗರಗ ಪೊಲೀಸ್ ಠಾಣೆ ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಪಿಎಸ್ಐ ಸಿದ್ದರಾಮಪ್ಪ ಉನ್ನದ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಇವರ ಕಾರ್ಯವೈಖರಿಯನ್ನು ಪೊಲೀಸ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.