ನಕಲಿ ಪತ್ರಕರ್ತರ ಸೋಗಿನಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಗ್ಯಾಂಗಿನ ಓರ್ವ ಸದಸ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಕಳ್ಳರು ಬಹಳ ದಿನಗಳಿಂದ ಕಳ್ಳತನ ಮಾಡಿ ಪೊಲೀಸರಿಂದ ಎಸ್ಕೇಪ್ ಆಗುತ್ತಿದ್ದರಂತೆ. ತಮ್ಮ ಕಾರ್ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದೆ ಇವರ ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಬೆಳಗಾವಿಯ ಮಾಳ ಮಾರುತಿ ಠಾಣೆಯ ಪೊಲೀಸರು ಚುರುಕಿನ ಕಾರ್ಯಾಚರಣೆಯಿಂದ ಈ ಕಳ್ಳರ ಆಟ ಬಯಲಾಗಿದೆ.
ಬಂಧಿತ ಕಳ್ಳ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ನಾಗರಾಜ್ ಕಚೇರಿ ಎಂದು ತಿಳಿದುಬಂದಿದ್ದು ಈತ ಕರ್ನಾಟಕದಲ್ಲಿ ಪತ್ರಕರ್ತನ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ. ಈತನಿಗೆ ಸಹಚರರಾಗಿ ಹುಸೇನ್, ಸಾಗರ್ ಗಾಯಕಾವಾಡ್,ಅಮೂಲ್,ಕೇತ್ಯಾ ಎಂಬ ಆರೋಪಿಗಳು ಸಾತ ನೀಡಿದ್ದು, ಅವರೆಲ್ಲರೂ ಎಸ್ಕೇಪ್ ಆಗಿದ್ದಾರೆ, ತಲೆಮರೆಸಿಕೊಂಡ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಯು ಬೆಳಗಾವಿಯ ಮಹಾಂತೇಶ ನಗರ, ಆಂಜನೇಯ ನಗರ ಹಾಗೂ ಶಿವಬಸವ ನಗರದಲ್ಲಿ ಕಳ್ಳತನ ಮಾಡಿದ್ದು ಬಂಧಿತನಿಂದ 20 ಲಕ್ಷ ಮೌಲ್ಯದ ಕಾರ್ ಹಾಗೂ 10 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಮಾಳ ಮಾರುತಿ ಠಾಣೆಯ ಪೊಲೀಸರ ಕಾರ್ಯವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.