ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ಕೇಶ್ವಾಪೂರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಆನಂದನಗರದ ನಿವಾಸಿ ಮಹಮ್ಮದ ಅಲಿ ಅಲ್ಲಾಬಕ್ಷ ನಾಲಬಂದ ಎಂದು ತಿಳಿದುಬಂದಿದ್ದು, ಬಂಧಿತ ಆರೋಪಿಯಿಂದ 3,10,000 ರೂ. ಮೌಲ್ಯದ ಒಟ್ಟು 47 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾನು ಕೇಶ್ವಾಪೂರ ಪೊಲೀಸ್ ಠಾಣೆಯ ನಾಗಶೆಟ್ಟಿಕೊಪ್ಪ, ಅಶೋಕನಗರ ಠಾಣೆಯ ವ್ಯಾಪ್ತಿಯ ವಿಜಯನಗರದಲ್ಲಿ ಬೀಗ ಹಾಕಿದ ಮನೆಯ ಕೀಲಿ ಮುರಿದು ಚಿನ್ನಾಆಭರಣ ಹಾಗೂ ಹಣ ಕಳ್ಳತನ ಮಾಡಿದ ಕುರಿತು ಮತ್ತು ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪಿಂಟೂ ಸರ್ಕಲ್ ಬಳಿ ಒಂದು ಬೈಕ್ ಕಳ್ಳತನ ಮಾಡಿರುವ ಕುರಿತು ಆರೋಪಿ ಒಪ್ಪಿಕೊಂಡಿದ್ದಾನೆ.
ಇನ್ನು ಕಳ್ಳತನದ ಪ್ರಕರಣ ಭೇದಿಸಿದ ಕೇಶ್ವಾಪೂರ್ ಠಾಣೆಯ ಇನ್ಸ್ಪೆಕ್ಟರ್ ಕೆ ಎಸ್ ಹಟ್ಟಿ, ಪಿಎಸ್ಐ ದೇಸಾಯಿ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೋಲಿಸ್ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.