ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ರವಿವಾರ ನಡೆದ ರೌಡಿ ಶೀಟರ್ ಗಳ ನಡುವೆ ನಡೆದ ಗ್ಯಾಂಗ್ ವಾರ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡೇಟು ಹೊಡೆವುವ ಮೂಲಕ ಬಂಧನ ಮಾಡಿದ್ದಾರೆ.
ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ತಡರಾತ್ರಿ ರೌಡಿ ಶೀಟಿರ್ ಗಳ ನಡುವೆ ಗ್ಯಾಂಗ್ ವಾರ್ ನಡೆದ ಪರಿಣಾಮ ಜಾವೂರ್ ಎಂಬಾತನಿಗೆ ಗಂಭೀರ ಗಾಯಗಲಾಗಿದ್ದವು, ಕೂಡಲೇ ಆತನನ್ನು ಸ್ಥಳೀಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡ ಕಸಬಾಪೇಟ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಪರಿಶೀಲಿಸಿದಾಗ ರೌಡಿ ಶೀಟರ್ ಅಪ್ತಾಬ್ ಕರಡಿಗುಡ್ಡ ಎಂಬಾತನ ಕೈವಾಡ ಇರುವ ಬಗ್ಗೆ ದೃಢಪಡಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬುಡರಸಿಂಗಿ ರಸ್ತೆಯಲ್ಲಿ ಈತನನ್ನೂ ಬಂಧನ ಮಾಡಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಅವರ ಮೇಲೇನೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಪಿಎಸ್ಐ ವಿಶ್ವನಾಥ್ ಆಲಮಟ್ಟಿ ಅವರು ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಅಪ್ತಾಬ್ ಕಾಲಿಗೆ ಗುಂಡೇಟು ಹೊಡೆದು ಆರೋಪಿಯನ್ನು ಬಂಧನ ಮಾಡಿದ್ದಾರೆ.
ಗಾಯಾಳು ಪಿಎಸ್ಐ ವಿಶ್ವನಾಥ್ ಆಲಮಟ್ಟಿ ಪೊಲೀಸ್ ಸಿಬ್ಬಂದಿ ರಾಜು ರಾಠೋಡ, ಆರ್ ರಾಮಾಪುರ ಹಾಗೂ ಪಾಲಯ್ಯ ಎಂಬವರಿಗೆ ಗಾಯವಾಗಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಗುಂಡೆಡ್ತು ತಿಂದು ಗಾಯಗೊಂಡ ರೌಡಿ ಶೀಟರ್ ಮೇಲೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೂಲೆ ಪ್ರಕರಣ ದಾಖಲಾಗಿದೆಯಂತೆ.
ರೌಡಿ ಶೀಟರ್ ಗಳ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಬಾಗಿ ಆಗಿರುವ ಅಪರಾದಿಗಳಲ್ಲಿ ಪೋಲಿಸ್ ಕಮಿಷನರೇಟ್ ನಿಂದ ಭಯದ ವಾತಾವರಣ ಸೃಷ್ಟಿಯಾಗಿದೆ, ಇದೆ ರೀತಿ ಕಾರ್ಯಾಚರಣೆಗಳು ಮುಂದುವರಿದರೆ ಅವಳಿನಗರದ ಕ್ರೈಂ ರೇಟ್ ಕಂಟ್ರೋಲ್ ಮಾಡುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಲಿ ಅನ್ನೋದೇ ಸಾರ್ವಜನಿಕರ ಆಶಯವಾಗಿದೆ.