ಹುಬ್ಬಳ್ಳಿ: ಐತಿಹಾಸಿಕ ಇತಿಹಾಸ ಹೊಂದಿರುವ ಹುಬ್ಬಳ್ಳಿಯ ಗಿರಣಿಚಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಯಾರೋ ಕಿಡಿಗೇಡಿಗಳು ಸೋಮವಾರ ರಾತ್ರೋ ರಾತ್ರೋ ಕೆಡವಿರುವ ಘಟನೆ ನಡೆದಿದೆ.
ತನ್ನದೆಯಾದ ಐತಿಹಾಸಿಕ ಗುರತನ್ನು ಹೊಂದಿರುವ ಈ ಶಾಲೆಯು ಜನನೀಬಿಡ ಪ್ರದೇಶ ಹಾಗೂ ಕಾರವಾರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶಾಲೆಯನ್ನೆ ಕಿಡಿಗೇಡಿಗಳು ಕೆಡವಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರಿ ಶಾಲೆಯನ್ನು ಕೆಡವಿದರಿಗಾಗಿ ಪೊಲೀಸ್ ಶೋಧ ಕಾರ್ಯ ನಡೆಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬುದನ್ನು ಸರ್ಕಾರ ಸಾರಿ ಸಾರಿ ಜಾಗೃತಿ ಮೂಡಿಸುತ್ತಿದೆ. ಈ ನಡುವೆ ಸರ್ಕಾರಿ ಶಾಲೆಗಳಿಗೆ ಬೆಲೆನೆ ಇಲ್ಲದಂತಾಗಿದ್ದು, ಈ ಶಾಲೆಯನ್ನು ಕೆಡವಿದ್ದು, ಯಾರು, ಯಾವ ಉದ್ದೇಶಕ್ಕಾಗಿ ಎಂಬ ಸತ್ಯಾಸತ್ಯತೆಗಳು ಹೊರಬರಬೇಕಿದೆ.