ಹುಬ್ಬಳ್ಳಿ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮಾಸ್ಕ್ ಹಾಕಿಕೊಂಡ ವ್ಯಕ್ತಿಯೋರ್ವ ಬ್ಯಾಂಕಿನ ಹಣ ಸುಲಿಗೆ ಮಾಡಲು ಬಂದು, ಬ್ಯಾಂಕ್ ಸಿಬ್ಬಂದಿ ಕುತ್ತಿಗೆಗೆ ಚಾಕು ಹಿಡಿದು, 10 ಲಕ್ಷ ರೂಪಾಯಿ ಹಣ ಕೊಡಲು ಬೆದರಿಕೆ ಹಾಕಿದ ಘಟನೆ ನಡೆದಿದೆ.
ಬ್ಯಾಂಕ್ ಸಿಬ್ಬಂದಿ ಕುತ್ತಿಗೆಗೆ ಚಾಕು ಹಿಡಿದು ಕ್ಯಾಶ್ ಕೌಂಟರ್ ಹತ್ತಿರ ಹಣ ಲೂಟಿ ಮಾಡಲು ಮಂದ್ದಾಗಿದ್ದಾನೆ, ಇದನ್ನು ಗಮನಿಸಿದ ಉಳಿದ ಸಿಬ್ಬಂದಿಗಳು, ತಮ್ಮ ಸಿಬ್ಬಂದಿಯ ರಕ್ಷಣೆಗೆ ಮುಂದಾಗಿ ದರೋಡೆಕೋರರನ್ನು ಹಿಡಿಯಲು ಬಂದಾಗ ಅವರನ್ನು ತಳ್ಳಿ ಆರೋಪಿಯು ಬ್ಯಾಂಕ್ ನಿಂದ ಓಡಿಹೋಗಿದ್ದಾನೆ.
ಈ ಕುರಿತು ಪ್ರಕರಣವನ್ನೂ ದಾಖಲಿಸಿಕೊಂಡ ನವನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಮಿವುಲ್ಲಾ ಕೆ ಅವರು ಪ್ರತೈಕ ತಂಡ ರಚಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಐದೆ ಘಂಟೆಗಳಲ್ಲಿ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಗೋಪನಕೊಪ್ಪ ನಿವಾಸಿ ಮಂಜುನಾಥ್ ಹಬೀಬ್ (28 ವರ್ಷ ) ಎಂದು ತಿಳಿದುಬಂದಿದ್ದು, ಬಂಧಿತನಿಂದ ಸುಲಿಗೆಗೆ ಬಳಸಿದ್ದ ಎರಡು ಚಾಕು, ಬ್ಯಾಗ್ ಗಳನ್ನು ವಶಕ್ಕೆ ಪಡೆಡಿದ್ದಾರೆ.
ವಿಚಾರಣೆ ಕಾಲಕ್ಕೆ ಆರೋಪಿಯು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ಸುಲಿಗೆಯ ಕೃತ್ಯಕ್ಕೆ ಮುಂದಾಗಿದ್ದರ ಬಗ್ಗೆ ತಿಳಿದು ಬಂದಿದ್ದು, ಸದ್ಯ ಆರೋಪಿಯ ವಿರುದ್ಧ ಸೂಕ್ತ ಕಾನೂನು ಜರುಗಿಸಲಾಗಿದೆ.