ಹುಬ್ಬಳ್ಳಿ: ನಗರದ ಮಂಟೂರ ರೋಡಿನ ಮುಸ್ಲಿಂ ಸಮುದಾಯದ ಯುವಕರು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಮಂಟೂರ ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಮಂಡಳಿ ಜೊತೆ ಕೈ ಜೋಡಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದಲ್ಲದೆ ಪೂಜೆ ಮಾಡುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶವನ್ನು ದಾವೂದ್ ನದಾಫ್ ಹಾಗೂ ಅವರು ಸಹೋದರರು ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ಹಲವಾರು ವರ್ಷದಿಂದ ಗಣೇಶನ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದೇವೆ. ಯಾವ ದೇವರು ಆದರು ಒಂದೆ ನಾವು ಯಾಕೆ ತಾರತಮ್ಯ ಮಾಡಬೇಕು. ಹಿಂದು –ಮುಸ್ಲಿಂ ಅಣ್ಣ ತಮ್ಮಂದಿರಂತೆ ಇರುವಾಗ ಅನಾವಶ್ಯಕವಾಗಿ ಕೋಮು ಭಾವನೆ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ. ಹಿಂದು ಸಮುದಾಯದವರು ಗ್ರಾಮೀಣ ಪ್ರದೇಶದಲ್ಲಿ ಮೊರಹಂ ಹಬ್ಬವನ್ನು ಅತಿ ಸಂತೋಷದಿಂದ ಆಚರಿಸುವಾಗ ನಾವು ಯಾಕೆ ಗಣೇಶ ಹಬ್ಬವನ್ನು ಆಚರಿಸಬಾರದು ಎಂದು ದಾವೂದ್ ನದಾಫ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.