ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ನಂತರದಲ್ಲಿ ,ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತಿದೆ. ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು ಕೇವಲ ಪವಿತ್ರ ಗೌಡ ಒಬ್ಬಳಿಗೆ ಮಾತ್ರವಲ್ಲ ಎಂಬುದು ಬಯಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಆರೋಪಿಗಳಾದ ಪ್ರದೋಷ್ ಮತ್ತು ವಿನಯ್ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಆ ಪ್ರಕಾರವಾಗಿ ರೇಣುಕಾ ಸ್ವಾಮಿ ಇತರೆ ನಟಿಯರಿಗೂ ಕೂಡ ಅಶ್ಲೀಲವಾಗಿ ಮೆಸೇಜ್ ಮಾಡಿರುವ ಅಂಶ ಬಯಲಾಗಿದೆ.
ರೇಣುಕಾ ಸ್ವಾಮಿಯನ್ನು ಶೆಡ್ಡಿಗೆ ಕರೆತಂದು ಆತನ ಮೊಬೈಲ್ ಕಿತ್ತುಕೊಂಡು ಪರಿಶೀಲಿಸಿದಾಗ ಪ್ರದೋಷ್ ಮತ್ತು ವಿನಯ್ ಇದನ್ನ ಗಮನಿಸಿದ್ದಾರೆ. ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಶುಭ ಪುಂಜರಿಗೂ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿರುವುದು ಕಂಡುಬಂದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.