ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ವೃತ್ತದ ಫ್ಲೈಓವರ್ ಕಾಮಗಾರಿ ವೇಳೆ ಎಎಸ್ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್ ಪ್ರಕರಣಕ್ಕೆ ಸಂಬಂದಿಸಿ ಗುತ್ತಿಗೆದಾರ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಮಂಗಳವಾರ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಝಂಡು ಕಂಪನಿಯ ಎಂ.ಡಿ.ಗಳಾದ ರಾಮಕುಮಾರ ಝಂಡು, ಮೋಹಿತ ಝಂಡು, ಮನುದೀಪ ಝಂಡು, ಠಾಕೂರ ಪ್ರಾಜೆಕ್ಟ್ ಮ್ಯಾನೇಜರ್ ನಾಗೇಂದ್ರ ಪ್ರತಾಪಸಿಂಗ್, ಪ್ರೋಜೆಕ್ಟ್ ಹೆಡ್ ರಾಜೇಶ ಸರನ್, ಇಂಜಿನಿಯರ್ಗಳಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಕುಮಾರಕೌಶಿಕ, ಭೂಪೇಂದ್ರ, ಸೇಫ್ಟಿ ಅಧಿಕಾರಿ ಮಹೇಂದ್ರ ಪೇಮಲಾಲ, ಲೇಬರ್ ಗುತ್ತಿಗೆದಾರ ಮಹಮ್ಮದ್ ಯಮದೂರ, ಮೊಹಮದ್ ರಬಿವುಲ್ ಹಕ್, ಕ್ರೇನ್ ಆಪರೇಟರ್ ಅಸ್ಲಂ ಜಲೀಲಮಿಯಾನ್, ಲೇಬರ್ಗಳಾದ ಮಹ್ಮದ್ ಮಸೂದ, ಶಬೀಬ ಶೇಖ್, ಸಾಜಿದ್ ಅಲಿ, ರಿಜಾವುಲ್ ಹಕ್, ಮೊಹಮ್ಮದ್ ಸಮೀಮ್ ಶೇಖ್, ಮೊಹ್ಮದ್ ಆರೀಫ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೈಕ್ ಮೇಲೆ ಹೊರಟಿದ್ದ ಉಪನಗರ ಠಾಣೆ ಎಎಸ್ಐ ನಾಭಿರಾಜ ದಯಣ್ಣವರ ಮೇಲೆ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ನಾಭಿರಾಜ ಪುತ್ರ ವೃಷಭ ಅವರು ಗುತ್ತಿಗೆದಾರ ಕಂಪನಿಯ ನಿರ್ಲಕ್ಷೃದಿಂದ ನನ್ನ ತಂದೆಯ ಸ್ಥಿತಿ ಗಂಭೀರವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.