ಧಾರವಾಡ: ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಇಲ್ಲಿನ ಕೆಲಗೇರಿ ಕೇರಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಧಾರವಾಡದ ಸಾಧನಕೇರಿಯ ಮಂಗಳಗಟ್ಟಿ ಪ್ಲಾಟ್ ನಿವಾಸಿ ದಾದಾಪೀರ್ ಬಿಸ್ಟಿ ಎಂದು ತಿಳಿದುಬಂದಿದೆ. ಅತಿಯಾದ ಸಾಲದಿಂದ ಮನನೊಂದು ಮೃತಪಟ್ಟರುವ ಶಂಕೆ ವ್ಯಕ್ತವಾಗಿದ್ದು, ನಿಖರ ಮಾಹಿತಿ ತಿಳಿದು ಬರಬೇಕಿದೆ.
ಸದ್ಯ ಶವವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.