ಹುಬ್ಬಳ್ಳಿ: ಮಹಿಳೆಯ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತನ್ನ ಸ್ನೇಹಿತರನ್ನು ತೋರುಸುತ್ತೇನೆಂದು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಆರೋಪಿ ಮಹೇಶ್ ಕಾಲಿಗೆ ಗುಂಡೇಟು ನೀಡಿದ್ದಾರೆ.
ನೀಲಾ ಹಂಪಣ್ಣವರ ಅವರ ಮಗಳನ್ನು ಮದುವೆಯಾಗುವಂತೆ ಆರೋಪಿ ಮಹೇಶ್ ಒತ್ತಾಯ ಮಾಡುತಿದ್ದ, ಅಲ್ಲದೇ ಐದು ವರ್ಷದಿಂದ ಅವಳ ಪ್ರತಿಯೊಂದು ಚಲನವಲನ ಗಮನಿಸಿದ್ದ. ಆರೋಪಿಯಾದ ಸೈಕೊ ಮಹೇಶ್ ಹುಬ್ಬಳ್ಳಿಯ ಲೋಹಿಯಾನಗರದಲ್ಲಿ ಇರುವ ಹುಡುಗಿಯ ಮನೆಗೆ ನುಗ್ಗಿ ಅವಳನನ್ನು ಪೀಡಿಸಿದ್ದಾನೆ, ಇದನ್ನು ಅಡ್ಡಿಪಡಿಸಿದ ತಾಯಿಯಾದ ನೀಲಾ ಎಂಬುವರಿಗೆ ಚಾಕು ಇರಿದಿದ್ದಾನೆ.
ಮೊದಲೇ ಪ್ಲಾನ್ ಮಾಡಿಕೊಂಡ ಸೈಕೊ ಮಹೇಶ್ ಚಾಕು ಖರೀದಿಸಲು ತನ್ನ ಸ್ನೇಹಿತರಿಂದ ಇಪ್ಪತ್ತು ಸಾವಿರ ಹಣವನ್ನು ಪಡೆದಿದ್ದ, ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ತನ್ನ ಜೊತೆ ಓಡಿ ಹೋಗಲು ಒಪ್ಪಿದರೆ ಸರಿ ಇಲ್ಲವಾದಲ್ಲಿ ಅವಳನು ಕೊಳ್ಳುತ್ತೇನೆಂದು ತನ್ನ ಸ್ನೇಹಿತರಿಗೆ ಹೇಳಿದ್ದಾನಂತೆ. ಇದಕ್ಕೆ ಸಂಬಂಧಿಸಿದಂತೆ ಹಣ ಕೊಟ್ಟ ಸ್ನೇಹಿತರನ್ನು ತೋರಿಸುತ್ತೇನೆಂದು ಪೊಲೀಸರ ಜೊತೆ ಹೋದ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಪೋಲಿಸ್ ಇನ್ಸಪೆಕ್ಟರ್ ಹಾಗೂ ಓರ್ವ ಸಿಬ್ಬಂದಿಗೆ ಗಾಯಗಳಾಗಿವೆ, ಯಾವಾಗ ಈ ಸೈಕೊ ಮಹೇಶನ ಹುಚ್ಚಾಟ ಮಿತಿಮೀರಿದನ್ನು ಗಮನಿಸಿದ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿ ಮಹೇಶನ ಕಾಲಿಗೆ ಫೈರ್ ಮಾಡಿದ್ದಾರೆ.
ಗಾಯಗೊಂಡ ಪೋಲಿಸ್ ಇನ್ಸ್ಪೆಕ್ಟರ್, ಸಿಬ್ಬಂದಿ ಹಾಗೂ ಆರೋಪಿ ಮಹೇಶನನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಏನೇ ಆಗಲಿ ಅವಳಿನಗರದಲ್ಲಿ ಕ್ರೈಂ ರೇಟ್ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪನ ತೊಟ್ಟು ನಿಂತಿರುವ ಖಡಕ್ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಪುಂಡ ಪೊಕರಿಗಳ ಎದೆಯಲ್ಲಿ ನಡಕು ಹುಟ್ಟಿಸುವುದಲ್ಲದೆ ನಗರದ ಸಾರ್ವಜನಿಕರ ಮನದಲಿ ಮನೆ ಮಾಡಿರುವುದು ನಿಜಕ್ಕೂ ಅಭಿನಂದನೀಯ.