ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರೇಟ್ ನಿಂದ ಮಾದಕ ವಸ್ತು ತಡೆಗೆ ನಿರಂತರ ಅಭಿಯಾನ ನಡೆಸುತ್ತಾ ಬಂದಿದೆ. ಅದರಂತೆ ಸಾಕಷ್ಟು ಜನರ ಬಂಧನ ಮಾಡಿ ಡ್ರಗ್ಸ್ ಪೆಡ್ಲೆರ್ ಗಳಿಗೆ ನಡುಕ ಹುಟ್ಟಿಸಿದ್ದಾರೆ.
ಆದರೆ ಕೆಲ ದಿನಗಳ ಹಿಂದೆ ನಡೆದ ಪ್ರಕರಣ ಒಂದರಲ್ಲಿ ಯುವಕನೋರ್ವ ಪೊಲೀಸರ ಮೇಲೆಯೇ ಇಲ್ಲ ಸಲ್ಲದ ಆರೋಪ ಹೊರಿಸಿ ಖಾಕಿಗೆ ಕಪ್ಪು ಚುಕ್ಕೆ ತರಲು ಮುಂದಾಗಿದ್ದ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೆ ಏನಿದು ಪ್ರಕರಣ? ಯಾವ ಠಾಣೆದು ಎಂಬುದನ್ನು ಹೇಳ್ತೀವಿ ಕೇಳಿ…
ಹುಬ್ಬಳ್ಳಿಯ ಡ್ರಗ್ಸ್ ಪೆಡ್ಲರ್ ಒಬ್ಬ ನಿಷೇಧಿತ ಮಾದಕ ವಸ್ತುವನ್ನು ಕಳೆದ ಹಲವಾರು ವರ್ಷಗಳಿಂದ ನಿರಂತರಾಗಿ ಮಾರಾಟ ಜಾಲದಲ್ಲಿ ಪಳಗಿರುತ್ತಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಯುವಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿ, ಬಳಿಕ ಮಾದಕ ವಸ್ತು ಸೇವನೆ ಮಾಡಿರುವ ಕುರಿತಂತೆ ಪರೀಕ್ಷೆ ನಡೆಸಿದ್ದಾರೆ. ಆ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢ ಪಟ್ಟಿದೆ. ಇನ್ನು ನಿನ್ನ ಮೇಲೆ ಹೆಚ್ಚಿನ ವಿಚಾರಣೆ ಮಾಡುವುದಿದೆ ಮತ್ತೆ ಕರೆದಾಗ ಪೋಲಿಸ್ ಸ್ಟೇಷನ್ ಬಂದು ವಿಚಾರಣೆಗೆ ಸಹಕರಿಸಬೇಕೆಂದು ಯುವಕನಿಗೆ ಪೊಲೀಸರು ಹೇಳಿ ಕಳಿಸಿದ್ದಾರೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಯುವಕ ಅಸ್ವಸ್ಥಗೊಂಡಿದ್ದಾನೆ. ಆ ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಯುವಕನಿಗೆ ಪ್ಯಾನಿಕ್ ಅಟ್ಯಾಕ್ (PANIC ATTACK) ಆಗಿರುವುದು ವೈದ್ಯರ ವರದಿಯಿಂದ ಗೊತ್ತಾಗಿದೆ.
ಆದರೆ ಇದನ್ನೆ ಕೆಲವರು ಪೊಲೀಸ ಅಟ್ಯಾಕ್ (POLICE ATTACK) ಎಂದು ಬಿಂಬಿಸಿದ್ದಾರೆ. ಯುವಕನಿಗೆ ಪೊಲೀಸರ ವಿರುದ್ದ ಆರೋಪಿಸುವಂತೆ ಪ್ರೇರೆಸಿದ್ದಾರೆಂಬ ಸಂಗತಿ ತಿಳಿದುಬಂದಿದೆ. ಈ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಆತ್ಮಸ್ತೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಅದಾಗ್ಯೂ ಕೂಡಾ ಪೊಲೀಸರು ತಮ್ಮ ಚಾಕಚಕತೆಯಿಂದ ಈ ಪ್ರಕರಣವನ್ನು ಬೇದಿಸಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದು ಈ ಪ್ರಕರಣದ ಸತ್ಯತೆ…..
ಕರ್ನಾಟಕ ಪಬ್ಲಿಕ್ ವಾಯ್ಸ್ ನಿರಂತರವಾಗಿ ಅಪರಾಧದ ನೈಜ್ಯ ಸುದ್ದಿಗಳನ್ನು ಬಿತ್ತರಿಸುತ್ತಾ ಬಂದಿದ್ದು, ಅದರಂತೆ ಈ ಪ್ರಕರಣ ಸತ್ಯತೆಯ ಮಾಹಿತಿಯನ್ನು ಕಲೆಹಾಕಿ ತಿಳಿಸುವ ಕೆಲಸ ಮಾಡಿದೆ, ಅದರಂತೆ ಮುಂದೆ ಕೂಡ ನೈಜ್ಯ ಸುದ್ದಿಗಳನ್ನು ಪ್ರಕಟಿಸುವ ಕೆಲಸ ಮಾಡುತ್ತೆ.
ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ..
ಕರ್ನಾಟಕ ಪಬ್ಲಿಕ್ ವಾಯ್ಸ್, ಇದು ಅಪರಾಧ
ಸುದ್ದಿಗಳ ಅನಾವರಣ.