ಹುಬ್ಬಳ್ಳಿ; ಸಾರ್ವಜನಿಕರ ಭದ್ರತೆ, ಬೈಕ್ ಕಳ್ಳತನ ಪ್ರಕರಣಗಳ ತಡೆಗೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಹು-ಧಾ ಪೊಲೀಸ್ ಕಮೀಷನರೇಟ್ ಸಮರ ಸಾರಿದ್ದು, ಈ ನಿಟ್ಟಿನಲ್ಲಿ ರಾತ್ರಿ ವೇಳೆಯಲ್ಲಿ ಬೈಕ್ ಪೆಟ್ರೋಲಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಸರಿಯಾದ ದಾಖಲಾತಿಗಳು ಇರದ ಬೈಕ್ಗಳನ್ನು ಪರಿಶೀಲನೆ ಮಾಡಿ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ಬರುವ ಠಾಣೆಗಳ ಪೊಲೀಸರು ದಂಡ ಹಾಕುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಹುಧಾ ಪೊಲೀಸ್ ಕಮೀಷನರೇಟ್ ದಕ್ಷಿಣ ವ್ಯಾಪ್ತಿಯ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ, ಡಿಸಿಪಿ ಸಿ.ಆರ್.ರವೀಶ್, ಮಹಾನಿಂಗ ನಂದಗಾವಿ ಎಸಿಪಿ ಉಮೇಶ್ ಚಿಕ್ಕಮಠ, ಶಿವಪ್ರಕಾಶ್ ನಾಯ್ಕ್ ಅವರ ನೇತೃತ್ವದಲ್ಲಿ ಬೈಕ್ ಪೆಟ್ರೋಲಿಂಗ್ ನಡೆಸಲಾಯಿತು.
ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸುವ ಕೆಲಸ ಮಾಡಿದರೆ ದಾಖಲಾತಿಗಳಿಲ್ಲದ ಬೈಕ್ ಗಳನ್ನು ಪೊಲೀಸ್ ಠಾಣೆಗಳಿಗೆ ರವಾನೆ ಮಾಡಿ ಬಿಸಿ ಮುಟ್ಟಿಸಲಾಯಿತು.
ಸದಾ ಒಂದಿಲ್ಲೊಂದು ಜಾಗೃತಿಯೆಡೆಗೆ ಹೆಜ್ಜೆ ಇಡುವ ಕಮೀಷನರೇಟ್ ಇದೀಗ ಮತ್ತೊಂದು ಹೆಜ್ಜೆ ಇಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಕ್ಲಾಸ್ ತಗೆದುಕೊಂಡಿದೆ.. ಅಲ್ಲದೇ ರೋಡ್ ರೋಡಲ್ಲಿ ನಿಂತು ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಕಿಡಿಗೇಡಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವಳಿನಗರದ ಜನತೆ ಪೊಲೀಸರ ಕಾರ್ಯಕ್ಕೆ ಸಲಾಂ ಹೇಳಿದ್ದಾರೆ.