ಹುಬ್ಬಳ್ಳಿ; ನಗರದ ಕಲಘಟಗಿ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಡಿಯೋ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕಲಘಟಗಿ ರಸ್ತೆಯ ಅಂಚಟಗೇರಿ ಹತ್ತಿರ ಇರುವ \”ರಾಸ್ತಾ 63 ದಾಭಾ\” ಹತ್ತಿರ ಈ ಅಪಘಾತ ಸಂಭವಿಸಿದೆ. ಮಂಗಳೂರು ಕಡೆಗೆ ಹೊರಟಿದ್ದ ಗಣೇಶ್ ಟ್ರಾವೆಲ್ಸ್ ಬಸ್ ಹಾಗೂ ಡಿಯೊ ಬೈಕ್ ನಡುವೆ ಅಪಘಾತವಾಗಿದ್ದು, ಗಣೇಶಪೇಟ್ ನಿವಾಸಿಗಳಾದ ಮಲ್ಲಿಕ್ ಹಾಗೂ ವಾಸೀಂ ಗಾಯಗೊಂಡ ಯುವಕರಾಗಿದ್ದಾರೆ. ಅಪಘಾತ ಎಸಗಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ಯುವಕರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.