ಬೆಳಗಾವಿ: ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಹಿಂಡಲಗಾ ಗಣಪತಿ ಕೆರೆಯಲ್ಲಿ ಓರ್ವ ಬಾಲಕ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಹಾಗೂ ತಾಯಿ ಇರಬಹುದು ಎಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಪೊಲೀಸರು ಆಗಮಿಸಿದ್ದು ಘಟನೆಗೆ ಕಾರಣ ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ ಘಟನೆಗೆ ನೈಜ ಕಾರಣ ಏನು ಎನ್ನುವುದು ಪೋಲಿಸ್ ತನಿಖೆಯ ನಂತರ ಗೊತ್ತಾಗಬೇಕಾಗಿದೆ.