ಹುಬ್ಬಳ್ಳಿ: ನಗರದ ಗಾಮನಗಟ್ಟಿ ಗ್ರಾಮದ ತರಿಹಾಳ್ ರಸ್ತೆಯ ಚರಂಡಿವೊಂದರಲ್ಲಿ ನವಜಾತ ಶಿಶುವೊಂದನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಶವವಾಗಿ ನವಜಾತು ಶಿಶು ಚರಂಡಿಯಲ್ಲಿ ಪತ್ತೆಯಾಗಿದ್ದು, ಯಾರದೆಂಬುದು ಪತ್ತೆಯಾಗಿಲ್ಲ, ಆದರೇ ನವಜಾತ ಶಿಶುವನ್ನು ಚರಂಡಿಯಲ್ಲಿ ಎಸೆದು ಹೋದ ಹಿನ್ನಲೆ ಸಾರ್ವಜನಿಕರು ನವಜಾತು ಶಿಶುವಿನ ನೋಡಿ, ಎಪಿಎಂಸಿ ನವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ನವಜಾತ ಶಿಶುವನ್ನು ಚರಂಡಿಯಿಂದ ತೆಗೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.