ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಲ್ಲಾ ಒಂದು ಸಮಸ್ಯೆಯಿಂದ ಬಿ.ಆರ್.ಟಿ.ಎಸ್ ಚಿಗರಿ ಬಸ್ ಸುದ್ದಿಯಾಗುತ್ತಿದ್ದು, ಇದೀಗ ತಾಂತ್ರಿಕ ದೋಷದಿಂದ ಮಳೆಯಲ್ಲಿಯೇ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ಬಿ.ಆರ್.ಟಿ.ಎಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಬಳಿಯಲ್ಲಿ ತಾಂತ್ರಿಕ ದೋಷದಿಂದ ಬಸ್ ಕೆಟ್ಟು ನಿಂತಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಚಾಲಕನಿಗೆ ತರಾಟೆ ತಗೆದುಕೊಂಡು, ಬಿ.ಆರ್.ಟಿ.ಎಸ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಹೋಗುತ್ತಿದ್ದ ಪ್ರಯಾಣಿಕರು, ಬೈರೀದೇವರಕೊಪ್ಪ, ನವನಗರ, ಸೇರಿ ವಿವಿಧೆಡೆ ತೆರಳುತ್ತಿದ್ದ ಪ್ರಯಾಣಿಕರು ಮಳೆಯಲ್ಲಿಯೇ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೇ ಬಿ.ಆರ್.ಟಿ.ಎಸ್ ಪಥದಲ್ಲಿ ಬಿ.ಆರ್.ಟಿ.ಎಸ್ ಬಸ್ಗಳನ್ನು ತಡೆದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.