ಹುಬ್ಬಳ್ಳಿ: ನವನಗರ ಡಾ. ಪುನೀತ್ ರಾಜಕುಮಾರ ಅಭಿಮಾನಿಗಳ ಬಳಗದ ವತಿಯಿಂದ ಅ.29 ರಂದು ಡಾ. ಪುನೀತ ರಾಜಕುಮಾರ ಪುಣ್ಯಸ್ಮರಣೆ ಅಂಗವಾಗಿ ಸಂಜೆ 4 ಕ್ಕೆ ಕರ್ನಾಟಕ ವೃತ್ತದ ಬಳಿ ಇರುವ ಪುನೀತ ರಾಜಕುಮಾರ ವತ್ತದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಸುನೀಲ ರೇವಣಕರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪುನೀತ ಅವರ ಸವಿ ನೆನಪಿಗಾಗಿ ಹಾಡಿನ ಸ್ಪರ್ಧೆ, ವೃದ್ಧರಿಗೆ ಬಟ್ಟೆ ವಿತರಣೆ, ಗೋವುಗಳಿಗೆ ಮೇವು ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಮಹನೀಯರಿಗೆ ಡಾ. ಪುನೀತ ರಾಜರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.
ಹಾಡಿನ ಸ್ಪರ್ಧೆಯಲ್ಲಿ ವಿಜೇತರಾದ 11 ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅ.26 ಮತ್ತು 27 ರವರೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹಾಡಿನ ಸ್ಪರ್ಧೆಯ ನಿರ್ಣಾಯಕರಾಗಿ ಚಾಂಪ್ಸ್ ಕರೋಕೆಯ ಮಲ್ಲಯ್ಯಜ್ಜ ಹಿರೇಮಠ, ಸುನೀಲ ಬಾಗಲೆ ಭಾಗವಹಿಸುವರು. ಹಾಡಿನ ಸ್ಪರ್ಧೆಯ ಮಾಹಿತಿಗಾಗಿ 7349418139, 8310541212 ಸಂಪರ್ಕಿಸಬಹುದು ಎಂದು ಹೇಳಿದರು.
ಬಳಗದ ಕಾರ್ಯಾಧ್ಯಕ್ಷ ಮಲ್ಲಯ್ಯ ಹಿರೇಮಠ, ಅಲೀಸಾಬ್ ನದಾಫ್, ಕುಶಾಲ ಅವಲಕ್ಕಿ ಉಪಸ್ಥಿತರಿದ್ದರು ಇದ್ದರು.